ಧಾರವಾಡ: ಧಾರವಾಡ ಮುರುಘಾಮಠದ ಮುಂಭಾಗದಲ್ಲಿ ಹಾಕಲಾಗಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ಅವರ ಭಾವಚಿತ್ರವುಳ್ಳ ಬ್ಯಾನರ್ ಗೆ ಕಿಡಿಗೇಡಿಗಳು ಕತ್ತರಿ ಹಾಕಿದ್ದಾರೆ.
ಮೇಲ್ದರ್ಜೆಗೇರಿದ ಧಾರವಾಡದ ರೈಲು ನಿಲ್ದಾಣದ ಉದ್ಘಾಟನೆಗೆ ಆಗಮಿಸುತ್ತಿರುವ ರೈಲ್ವೆ ಸಚಿವರಿಗೆ ಸ್ವಾಗತ ಕೋರಿ ಧಾರವಾಡದ ಅಲ್ಲಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅಮೃತ ದೇಸಾಯಿ ಅವರ ಭಾವಚಿತ್ರವಳ್ಳ ಬ್ಯಾನರ್ಗಳನ್ನು ಹಾಕಲಾಗಿದೆ. ಅದೇ ರೀತಿ ಮುರುಘಾಮಠದ ಮುಂಭಾಗಲ್ಲೂ ಬ್ಯಾನರ್ ಹಾಕಲಾಗಿದ್ದು, ಅದಕ್ಕೆ ಕಿಡಿಗೇಡಿಗಳು ಕತ್ತರಿ ಹಾಕಿದ್ದಾರೆ.
Kshetra Samachara
11/10/2022 12:51 pm