ಧಾರವಾಡ: ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿಯನ್ನು ಖದೀಮರು ಕದ್ದೊಯ್ದು ಚರಂಡಿ ಸೇತುವೆ ಕೆಳಗಡೆ ಇಟ್ಟು ಹೋದ ಘಟನೆ ಧಾರವಾಡದ ಶ್ರೀರಾಮ ನಗರದಲ್ಲಿ ನಡೆದಿದೆ.
ಶೀಲಾ ಗೌಡರ ಎಂಬ ಅಂಗವಿಕಲ ಮಹಿಳೆಗೆ ಸೇರಿದ ಸ್ಕೂಟಿಯನ್ನೇ ಖದೀಮರು ಕದ್ದೊಯ್ದಿದ್ದರು. ನಿನ್ನೆ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಈ ಸ್ಕೂಟಿಯನ್ನು ಖದೀಮರು ಕದ್ದೊಯ್ದು ಮನೆಯ ಹಿಂಭಾಗದ ಚರಂಡಿಯ ಸೇತುವೆ ಕೆಳಗಡೆ ಅದನ್ನು ಬಚ್ಚಿಟ್ಟು ಪರಾರಿಯಾಗಿದ್ದಾರೆ.
ಬಾಗಿಲ ಮುಂಭಾದಲ್ಲಿ ನಿಲ್ಲಿಸಿದ್ದ ಸ್ಕೂಟಿ ಕಾಣದೇ ಹೋದಾಗ ಮನೆಯವರು ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಮಧ್ಯಾಹ್ನದಷ್ಟೊತ್ತಿಗೆ ಆ ಸ್ಕೂಟಿ ಚರಂಡಿಯ ಸೇತುವೆ ಕೆಳಗಡೆ ಪತ್ತೆಯಾಗಿದೆ. ಸ್ಥಳೀಯರ ನೆರವಿನಿಂದ ಆ ಸ್ಕೂಟಿಯನ್ನು ಮೇಲೆತ್ತಿ ಮರಳಿ ಶೀಲಾ ಅವರಿಗೆ ನೀಡಲಾಗಿದೆ.
Kshetra Samachara
07/10/2022 08:00 pm