ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಸ್ತಿ, ಬಂಗಾರದ ವಿಚಾರಕ್ಕೆ ಅಣ್ಣನಿಂದಲೇ ಸ್ವಂತ ತಮ್ಮನಿಗೆ ಚಾಕು ಇರಿತ

ಹುಬ್ಬಳ್ಳಿ: ಆಸ್ತಿ ಹಾಗೂ ಬಂಗಾರದ ವಿಚಾರಕ್ಕೆ ಸಂಬಂಧಿಸಿದಂತೆ, ಅಣ್ಣನಿಂದಲ್ಲೇ ಸ್ವಂತ ತಮ್ಮನಿಗೆ ಚಾಕು ಇರಿತವಾದ ಘಟನೆ ನಗರದ ಕೇಶ್ವಾಪೂರದಲ್ಲಿ ನಡೆದಿದೆ.

ಅಣ್ಣ ಸಂಜಯ ಬಾಕಳೆ ಎಂಬುವನಿಂದ ಸಾಗರ್ ಬಾಕಳೆ ಎಂಬಾತನಿಗೆ ಚಾಕು ಇರಿತವಾಗಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ, ಪೂಜೆಗೆ ತಮ್ಮ ಸಾಗರ್, ಬಂಗಾರ ಕೇಳಿದ್ದಕ್ಕೆ ಅಣ್ಣ ಸಂಜಯ ಚಾಕು ಇರಿದಿದ್ದಾನೆ. ಅಲ್ಲದೆ ಅಣ್ಣ ತಮ್ಮಂದಿರ ಆಸ್ತಿ ವಿಚಾರವಾಗಿ ಹಲವಾರು ವರ್ಷಗಳಿಂದ ಕುಟುಂಬದಲ್ಲಿ ಕಲಹವಿತ್ತು ಎನ್ನಲಾಗಿದೆ‌. ಅಣ್ಣ ಸಂಜಯ್ ಹಾಗೂ ಪತ್ನಿ ಸೋನಾಲಿಯಿಂದ ಆಸ್ತಿ ವಿಚಾರವಾಗಿ ನಿರಂತರವಾಗಿ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

ಸಾಗರನಿಗೆ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಅಣ್ಣ ಪರಾರಿಯಾಗಿದ್ದು, ಸದ್ಯ ಸಾಗರಗೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಕುರಿತು ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
Kshetra Samachara

Kshetra Samachara

06/10/2022 12:08 pm

Cinque Terre

54.37 K

Cinque Terre

6

ಸಂಬಂಧಿತ ಸುದ್ದಿ