ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಂಡನ ಸಾವಿಗೆ ನ್ಯಾಯ ಕೊಡಿಸದ ಪೊಲೀಸರು; ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪುಷ್ಪಾ

ಆತ್ಮಹತ್ಯೆ ಮಾಡಿಕೊಂಡ ಪುಷ್ಪಾ ಪಟದಾರಿ ತನ್ನ ಸಾವಿಗೆ ಏನು ಕಾರಣ ಎಂಬ ಡೆತ್ ನೋಟ್ ಬರೆದಿಟ್ಟಿದ್ದು, ಇದೀಗ ಪುಸ್ಪಾ ಬರೆದಿಟ್ಟಿದ್ದ ಡೆತ್ ನೋಟ್ ಇದೀಗ ಲಭ್ಯವಾಗಿದೆ.

ತಾನು ಆತ್ಮಹತ್ಯೆ ಮಾಡಿಕೊಂಡಿದ್ದ ರೂಮ್ ನ ಕಬಾಡನಲ್ಲಿ ಡೆತ್ ನೋಟ್ ಲಭ್ಯವಾಗಿದೆ.ಮನೆಯವರು ಪುಷ್ಪಾಳ ತಿಥಿಯ ಸಲುವಾಗಿ ಮನೆ ಸ್ವಚ್ಛ ಗೊಳಿಸುತ್ತಿದ್ದಾಗ ಬಟ್ಟೆಯ ಗಂಟಿನಲ್ಲಿ ಈ ಡೆತ್ ನೋಟ್ ಲಭ್ಯವಾಗಿದೆ.

ಡೆತ್ ನೋಟ್ ನಲ್ಲಿ ಮೇಟಿ ಕುಟುಂಬದವರಾದ ಯಲ್ಲಪ್ಪ,ನವೀನ,ಕುಮಾರ,ರುದ್ರಪ್ಪ ಎಂಬುವರು ನನ್ನ ಗಂಡನಾದ ದೀಪಕ ಪಟದಾರಿಯ ರಾಜಕೀಯ ಏಳಿಗೆಯನ್ನು ಸಹಿಸದೆ ಕೊಲೆ ಮಾಡಿದ್ದಾರೆ.ಆದ್ರೆ ನನ್ನ ಗಂಡನ ಸಾವಿಗೆ ನ್ಯಾಯವನ್ನು ಕೊಡಿಸಬೇಕಾದ ಪೊಲೀಸರು ನಮಗೆ ನ್ಯಾಯ ಕೊಡಿಸದ ಹಿನ್ನೆಲೆಯಲ್ಲಿ ನಾನು ನೊಂದಿದ್ದೇನೆ,ಹೀಗಾಗಿ ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸಲು ಕೂಡಾ ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ದುಷ್ಟ ಸರ್ಕಾರದಲ್ಲಿ ನನಗೆ ಬದುಕಲು ಇಷ್ಟ ಇಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದೇನೆ.

ಅಷ್ಟೇ ಅಲ್ಲದೆ ಇನ್ನಾದರೂ ಪೊಲೀಸ್ ಅಧಿಕಾರಿಗಳು ನನ್ನ ಸಾವಿನ ನಂತರ ಕೊಲೆಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಸಬೇಕು,ಅಲ್ಲಿಯವರೆಗೆ ನನ್ನ ಕೊನೆಯ ವಿಧಿ ವಿಧಾನ ಮಾಡುವಂತಿಲ್ಲ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದು,ಇದೀಗ ಪುಷ್ಪಾ ಸಾವಿಗೆ ಮತ್ತೊಂದು ತಿರುವು ಸಿಕ್ಕಿದಂತಾಗಿದೆ.

ಇನ್ನು ಮೇಲಾದರೂ ನವನಗರ ಠಾಣೆಯ ಪೊಲೀಸರು ಈ ಡೆತ್ ನೋಟ್ ನಲ್ಲಿ ಉಲ್ಲೇಖವಾಗಿರುವ ಅಂಶವನ್ನು ಇಟ್ಟುಕೊಂಡು ಪ್ರಾಮಾಣಿಕವಾಗಿ ತನಿಖೆಯನ್ನು ಮಾಡುತ್ತಾರೋ ಅಥವಾ,ಹಳೇ ಹುಬ್ಬಳ್ಳಿಯ ಪೊಲೀಸರ ರೀತಿಯಲ್ಲಿ ಪ್ರಕರಣ ಹಳ್ಳ ಹಿಡಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/10/2022 12:22 pm

Cinque Terre

150.77 K

Cinque Terre

14

ಸಂಬಂಧಿತ ಸುದ್ದಿ