ಹುಬ್ಬಳ್ಳಿ: ದೀಪಕ ಪಟದಾರಿ ಸಾವಿಗೆ ನ್ಯಾಯ ಬೇಕು ಅಂತಾ ಅಲೆದಾಡುತ್ತಿದ್ದ ದೀಪಕ ಪತ್ನಿ ಪುಷ್ಪಾ ತನ್ನ ಸಂಬಂಧಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನವನಗರದ ಶಿವಾನಂದ ನಗರದಲ್ಲಿರುವ ತಮ್ಮ ಸಂಬಂದಿಯ ಮನೆಯಲ್ಲಿಯೇ ಕಳೆದ ಕೆಲವು ದಿನಗಳಿಂದ ವಾಸವಿದ್ದ ಮನೆಯಿಂದಲೇ ಪುಷ್ಪಾ ಸಿಐಡಿ ವಿಚಾರಣೆ ವೇಳೆ ಇಲ್ಲಿಂದಲೇ ಓಡಾಡುತ್ತಿದ್ದರು.
ಇಂದು ಸಾಯಂಕಾಲ 7.30ರ ವೇಳೆಗೆ ಮನೆಯವರ ಜೊತೆ ಚೆನ್ನಾಗಿ ಮಾತನಾಡುತ್ತಾ ಇದ್ದ ಪುಷ್ಪಾ,7.30 ನಂತರ ರೂಮಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,ಮನೆಯವರು ಸಾಕಷ್ಟು ಬಾರಿ ಬಾಗಿಲು ಬಡೆದಾಗ ಕದ ತೆಗೆಯದ ಹಿನ್ನೆಲೆ ಮನೆ ಬಾಗಿಲು ಮುರಿದು ನೋಡಿದಾಗ ನೇಣಿಗೆ ಶರಣಾಗಿದ್ದು ಗೊತ್ತಾಗಿದೆ.
ಕೂಡಲೇ ಮನೆಯವರು ನವನಗರ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು,ಸ್ಥಳಕ್ಕೆ ನವನಗರ ಠಾಣೆಯ ಪೊಲೀಸರು ಹಾಗೂ ಎಸಿಪಿ ವಿನೋದ ಮುಕ್ತೇದಾರ ಸ್ಥಳಕ್ಕೆ ಭೇಟಿ ನೀಡಿ ಶವ ಪರಿಶೀಲನೆ ನಡೆಸಿದ್ದಾರೆ.
Kshetra Samachara
28/09/2022 10:50 pm