ಕುಂದಗೋಳ : ಸಾಲ ಬಾಧೆ ಹಾಗೂ ಇತ್ತೀಚೆಗೆ ಸುರಿದ ಅತಿವೃಷ್ಟಿಯಿಂದ ಬೆಳೆಹಾನಿಯಾಗಿ ತೀವ್ರವಾಗಿ ಮನನೊಂದಿದ್ದ ಕುಂದಗೋಳ ತಾಲೂಕು ಕೊಡ್ಲಿವಾಡ ಗ್ರಾಮದ ರೈತ ಹನುಮಪ್ಪ ಯಲ್ಲಪ್ಪ ಬಾಲೆಹೊಸೂರ (65) ಕ್ರಿಮಿನಾಶಕ ಸೇವಿಸಿ ಸೋಮವಾರ ಸೆ.26 ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ರೈತ ಬರದ್ವಾಡ ಕೆನರಾ ಬ್ಯಾಂಕ್ ಶಾಖೆಯಲ್ಲಿ 1 ಲಕ್ಷ 50 ಸಾವಿರ ರೂ.ಸಾಲ ಹೊಂದಿದ್ದರು. ಸಾಲ ಮರುಪಾವತಿಗೆ ಬ್ಯಾಂಕ್ ಒತ್ತಡ ಹೇರಿತ್ತು. ಸ್ವಂತದ 2 ಎಕರೆ 13 ಗುಂಟೆ ಹೊಲದ ಜೊತೆಗೆ ಲಾವಣಿಯಾಗಿ 9 ಎಕರೆ ಹೊಲ ಮಾಡುತ್ತಿದ್ದರು. ಇತ್ತೀಚೆಗೆ ಸುರಿದ ಅತಿವೃಷ್ಟಿಗೆ ಎಲ್ಲಾ ಬೆಳೆಗಳು ಕೊಚ್ಚಿಕೊಂಡು ಹೋಗಿದ್ದವು. ಇದರಿಂದ ತೀವ್ರವಾಗಿ ಮನನೊಂದಿದ್ದ ಹನುಮಪ್ಪ ಮನೆಯಲ್ಲಿದ್ದ ಕಳೆನಾಶಕ ಸೇವಿಸಿದ್ದರು, ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ಕರೆದೊಯ್ಯಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
27/09/2022 12:53 pm