ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಾಲೀಕನ ಕಣ್ಣೆದುರೇ ಚಿನ್ನ ಕದ್ದ ಕಳ್ಳಿಯರು: ಎಕ್ಸಕ್ಲೂಸಿವ್ ದೃಶ್ಯಗಳು ಪಬ್ಲಿಕ್ ನೆಕ್ಸ್ಟ್‌ಗೆ ಲಭ್ಯ

ಹುಬ್ಬಳ್ಳಿ: ಅಕ್ಕಸಾಲಿಗನ ಅಂಗಡಿಗೆ ಬಂದ ಭಿಕ್ಷುಕರು ನೋಡನೋಡುತ್ತಿದ್ದಂತೆ ಚಿನ್ನದ ಗಟ್ಟಿಯನ್ನು ಮಂಗಮಾಯ ಮಾಡಿರುವ ಘಟನೆ ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಅಂಗಡಿಯಲ್ಲಿ ನಡೆದಿದ್ದು, ಘಟನೆಯ ಎಕ್ಸಕ್ಲೂಸಿವ್ ವಿಡಿಯೋ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಲಭ್ಯವಾಗಿದೆ.

ಹೌದು..ಅಕ್ಕಸಾಲಿಗನ ಅಂಗಡಿಗೆ ಬಂದ ಭಿಕ್ಷುಕರು ತೋರಿದ ಕೈ ಚಳಕ‌ ನೋಡಿದರೇ ನಿಜಕ್ಕೂ ಎಂತವರೂ ಕೂಡ ಅಚ್ಚರಿ ಪಡುವುದು ಖಂಡಿತ. ಭಿಕ್ಷೆ ಬೇಡುವ ನೆಪದಲ್ಲಿ ಅಂಗಡಿಗೆ‌ ನುಗ್ಗಿದ ಮಹಿಳೆಯರು ಹಾಗೂ ಮಕ್ಕಳು, ಮಾಲೀಕನ ಗಮನ ಬೇರೆಡೆ ಸೆಳೆದು ಲಕ್ಷ ಲಕ್ಷ ಚಿನ್ನ ದೋಚಿಸಿದ ಕಳ್ಳಿಯರ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಮಾಲೀಕನ ಕಣ್ಣೆದುರೆಲ್ಲ 200 ಗ್ರಾಂ ಚಿನ್ನದ ಗಟ್ಟಿ ಕಳುವು ಮಾಡಿದ್ದು, ಬಂಗಾರ ಗಟ್ಟಿ ಹೊತ್ತೊಯ್ಯುವ ದೃಶ್ಯ ಸಿಸಿಟವಿಯಲ್ಲಿ ಸೆರೆಯಾಗಿದ್ದು, ಚಾಲಕಿ ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/09/2022 12:43 pm

Cinque Terre

200.61 K

Cinque Terre

1

ಸಂಬಂಧಿತ ಸುದ್ದಿ