ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕ್ರಿಮಿ ರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗತ್ತಲೇ ಇದೆ, ಈ ರೌಡಿಗಳಿಗೆ ಪೊಲೀಸರ ಭಯ ವಿಲ್ಲದಂತಾಗಿದೆ. ಹಾಡ ಹಗಲೇ ಈ ಕ್ರಿಮಿ ರೌಡಿಗಳು ಗುಂಪು ಕಟ್ಟಿಕೊಂಡು ಬೇರೆ ಗುಂಪಿನ ಜೊತೆ ಹೊಡೆದಾಡಿಕೊಂಡ ಘಟನೆ ಹುಬ್ಬಳ್ಳಿಯ ದೇವಾಂಗಪೇಟೆಯೆಲ್ಲಿ ನಡೆದಿದೆ.
ಹೌದು ಒಂದು ಹುಡುಗಿಯ ವಿಚಾರವಾಗಿ ಏರೆಡು ಗುಂಪಿನ ನಡುವೆ ಮಾರಾಮಾರಿ ಆಗಿದೆ. ಸೆ.18 ರಂದು ಸೂರಜ್ ಎನ್ನುವ ಹುಡುಗನಿಗೆ, ಕಾರ್ತಿಕ ಕಾಶಿ ಎನ್ನುವ ಹುಡುಗ ನಾಗರಾಜನ ಪೋನಿನಿಂದ ಪೋನ್ ಮಾಡಿ, ಹುಡುಗಿಯ ವಿಷಯವಾಗಿ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ, ದೇವಾಂಗಪೇಟ್ ಸ್ಮಶಾನಗಟ್ಟಿಯ ಹತ್ತಿರ ಬರುವಂತೆ ಹೇಳಿದ್ದಾನೆ. ಆಗ ಸೂರಜ್ ತನ್ನೊಂದಿಗೆ ಇದ್ದ ಮನೋಜ್, ಸಂಪತ್, ವರುಣ, ಶುಭಂ, ತಾಯಾ ಇವರೊಂದಿಗೆ ದೇವಾಂಗಪೇಟ್ ಸ್ಮಶಾನಗಟ್ಟಿಯ ಹತ್ತಿರ ಹೋಗಿದ್ದಾರೆ. ಆಗ ಕಾರ್ತಿಕ ಮತ್ತು ನಾಗರಾಜ ಗುಂಪು ಹಾಗೂ ಸೂರಜ್ ಗುಂಪು ನಡುವೆ ಮಾರಾಮಾರಿ ಆಗಿದ್ದು ಇಬ್ಬರು ಪರಸ್ಪರ ಹೊಡೆದಾಡಿ ಕೊಂಡು ಚಾಕುವಿನಿಂದ ಹಲ್ಲೆ ಮಾಡಿಕೊಂಡಿದ್ದಾರೆ.
ಈ ಒಂದು ಘಟನೆ ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಎರೆಡು ಕಡೆಯಿಂದ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಜೈಲಿಗೆ ಅಟ್ಟಿದ್ದಾರೆ.
Kshetra Samachara
20/09/2022 09:39 pm