ಹುಬ್ಬಳ್ಳಿ: ಕಳೆದ ಜುಲೈನಲ್ಲಿ ಗ್ರಾಪಂ ಸದಸ್ಯನ ಹತ್ಯೆಯಾಗಿತ್ತು. ದುಷ್ಕರ್ಮಿಗಳು ಬರ್ಬರವಾಗಿ ಗ್ರಾಪಂ ಸದಸ್ಯನನ್ನು ಹತ್ಯೆ ಮಾಡಿದ್ದರು. ಇದೀಗ ಆ ಹತ್ಯೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹತ್ಯೆ ಹಿಂದೆ ಪೊಲೀಸರ ಕೈವಾಡ ಇದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.
ಆ ಸದಸ್ಯ ಕೊಲೆಯಾಗುವ 15 ದಿನ ಮುನ್ನ ಪೊಲೀಸ್ ಅಧಿಕಾರಿ ಮಾಡಿರುವ ಮೆಸೇಜ್ ಇದೀಗ ಆರೋಪಕ್ಕೆ ಪುಷ್ಟಿ ನೀಡಿದೆ. ಹಾಗಾದರೆ ಆರೋಪ ಬಂದಿರುವ ಪೊಲೀಸರು ಯಾರು? ಕೊಲೆಯಾದ ಗ್ರಾಪಂ ಸದಸ್ಯ ಯಾರು? ಅಂತೀರಾ ಈ ಸ್ಟೋರಿ ನೋಡಿ.
ದೀಪಕ್ ಪಟದಾರಿ ಎನ್ನುವ ಗ್ರಾಪಂ ಸದಸ್ಯನ ಬರ್ಬರ ಹತ್ಯೆಯಾಗಿತ್ತು. ರಾತ್ರಿ ದುಷ್ಕರ್ಮಿಗಳು ದೀಪಕ್ ನನ್ನ ಆಯುಧದಿಂದ ಕೊಲೆ ಮಾಡಿದ್ದರು. 3 ತಿಂಗಳ ಹಿಂದೆ ನಡೆದ ಕೊಲೆಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದು ಕೊಲೆಯಲ್ಲಿ ಪೊಲೀಸರ ಕೈವಾಡ ಇರುವ ಅನುಮಾನ ಕುಟುಂಬಸ್ಥರದ್ದಾಗಿದೆ.
ಅದಕ್ಕೆಲ್ಲ ಸಾಕ್ಷಿ ಫೋನ್ ಸಂಭಾಷಣೆ ಹಾಗೂ ವಾಟ್ಸಪ್ ಮೆಸೇಜ್. ಹೀಗಾಗಿ ನಮಗೆ ಪೊಲೀಸರ ಮೇಲೆ ಅನುಮಾನ ಇದೆ ಎಂದು ಕೊಲೆಯಾದ ದೀಪಕ್ ಕುಟುಂಬಸ್ಥರ ಆರೋಪ. ಈ ಕುರಿತು ಕುಟುಂಬಸ್ಥರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಯಾವುದೂ ಪ್ರಯೋಜನ ಆಗಿಲ್ಲ ಎಂದು ನ್ಯಾಯಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ.
ಇನ್ನು, ದೀಪಕ್ ಕೊಲೆ ಪ್ರಕರಣ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಕೆಲವರನ್ನು ಅರೆಸ್ಟ್ ಮಾಡಿದ್ದಾರೆ. ಆದರೆ, ಕೊಲೆಗೆ ಕಾರಣವಾದ ಪ್ರಮುಖ ಆರೋಪಿಗಳನ್ನ ಅರೆಸ್ಟ್ ಮಾಡಿಲ್ಲ. ಪೊಲೀಸರೇ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಅನ್ನೋ ಗಂಭೀರ ಅರೋಪವೂ ಇದೆ.
ಕೊಲೆ ನಡೆದು 3 ತಿಂಗಳು ಕಳೆದ್ರೂ ಪ್ರಮುಖ ಆರೋಪಿಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಆದ್ರೆ, ಪೊಲೀಸರು ಅವರನ್ನು ಬಂಧಿಸೋ ಧೈರ್ಯ ಮಾಡ್ತಿಲ್ಲ. ಈ ನಡುವೆ ಪರಶುರಾಮ್ ಕಾಳೆ ಹಾಗೂ ನಾಗರಾಜ್ ಕೆಂಚಮ್ಮನವರ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಅಧಿಕಾರಿಗಳಿಗೆ ಕೊಟ್ಟ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ನನ್ನ ಗಂಡನ ಸಾವಿಗೆ ನ್ಯಾಯ ಬೇಕು ಎಂದು ಮೃತ ದೀಪಕನ ಹೆಂಡತಿ ಕಣ್ಣೀರು ಹಾಕುತ್ತಿದ್ದಾರೆ.
ಒಟ್ಟಾರೆ ಗ್ರಾಪಂ ಸದಸ್ಯ ದೀಪಕ್ ಮರ್ಡರ್ ಇದೀಗ ಮತ್ತೊಂದು ಟ್ವಿಸ್ಟ್ ಪಡೆದಿದೆ. ಪೊಲೀಸರು ಇನ್ನೂ ತನಿಖೆ ನಡೆಯುತ್ತಿದೆ ಅಂತಿದ್ದಾರೆ. ಇದೀಗ ದೀಪಕ್ ಕೊಲೆ ಕೇಸ್ ಪೊಲೀಸರ ಸುತ್ತ ಸುತ್ತುತ್ತಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಆಡಿಯೋ ಹಾಗೂ ವಾಟ್ಸಪ್ ಮೆಸೇಜ್ ನೋಡಿದರೆ ಪೊಲೀಸರ ಕೈವಾಡ ಇರೋ ಶಂಕೆ ವ್ಯಕ್ತವಾಗಿದೆ.
Kshetra Samachara
15/09/2022 07:53 pm