ಕುಂದಗೋಳ : ಮನೆಯಲ್ಲಿನ ಆಂತರಿಕ ಕಲಹಕ್ಕೆ ರೋಸಿಹೋಗಿ ಕೋಪದ ಕೈಯಲ್ಲಿ ಬುದ್ಧಿ ಕೊಟ್ಟ ವ್ಯಕ್ತಿಯೋರ್ವ ಅತ್ತಿಗೆಯ ಕತ್ತನ್ನೇ ಎಗರಿಸಿ ಈಗ ಕಂಬಿ ಹಿಂದೆ ಇದ್ದಾನೆ.ಹೌದು ! ಕಳೆದ ಹಲವಾರು ದಿನಗಳಿಂದ ಮನೆಯಲ್ಲಿನ ಆಂತರಿಕ ಕಲಹ ಅತಿರೇಕಕ್ಕೆ ತಿರುಗಿ ಹಿನ್ನೆಲೆಯಲ್ಲಿ ಇಂದು ಮೈದುನನೇ ತನ್ನ ಅತ್ತಿಗೆಯನ್ನು ಕುಡಗೋಲಿನಿಂದ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ ರಣ ಭೀಕರ ಘಟನೆ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ಮಧ್ಯಾಹ್ನದ ಅವಧಿಯಲ್ಲಿ ನಡೆದಿದೆ.
ಯರಿನಾರಾಯಣಪುರ ಗ್ರಾಮದ ಸುನಂದಾ ಮೆಣಸಿನಕಾಯಿ ಎಂಬ ಮಹಿಳೆಯೇ ಕೊಲೆಯಾದ ದುರ್ದೈವಿಯಾಗಿದ್ದು
ಆಕೆಯ ಮೈದುನ ಮಂಜುನಾಥ ಎಂಬಾತ ಕುಡಗೋಲಿನಿಂದ ಕುತ್ತಿಗೆಗೆ ಬಲವಾಗಿ ಹೊಡೆದಿದ್ದು ಮಹಿಳೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.
ಕೊಲೆಯಾದ ಕ್ಷಣದಲ್ಲೇ ನಾಪತ್ತೇಯಾದ ಆರೋಪಿಯನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೇ ಸ್ಥಳಕ್ಕೆ ಭೇಟಿ ಕೊಟ್ಟ ಕುಂದಗೋಳ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿ ಕೊಲೆ ಮಾಡಿದ ಆರೋಪಿಯನ್ನು ಬಂಧಿಸಿದ್ದು ಸ್ಥಳಕ್ಕೆ ಎಸ್ಪಿ ಸಹ ಭೇಟಿ ನೀಡಿ ಪ್ರಕರಣದ ವೃತ್ತಾಂತ ಆಲಿಸಿದ್ದಾರೆ.
ಈಗಾಗಲೇ ಕೊಲೆಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಮಾರುತಿ ಗುಳ್ಳಾರಿ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿದ್ದಾರೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
08/09/2022 09:47 pm