ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶೆಟರ್ ಮುರಿದು ಮೆಡಿಕಲ್ ಶಾಪ್ ಕಳ್ಳತನಕ್ಕೆ ಯತ್ನ: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ...!

ಹುಬ್ಬಳ್ಳಿ: ಶೆಟರ್ ಮುರಿದು ಮೆಡಿಕಲ್ ಶಾಪ್ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಹುಬ್ಬಳ್ಳಿಯ ವಿವೇಕಾನಂದ ಕಾಲೋನಿಯಲ್ಲಿ ನಡೆದಿದೆ. ಮೂವರು ಕಳ್ಳರಿಂದ ಕಳ್ಳತನಕ್ಕೆ ಯತ್ನ ನಡೆದಿದೆ. ಮೂವರು ಸೇರಿ ಶೆಟರ್ ಎತ್ತಲು ಯತ್ನಿಸುವ ಖದೀಮರು, ನಂತರ ಶೆಟರ್ ತೆರೆದುಕೊಳ್ಳದೇ ಇದ್ದುದ್ದರಿಂದ ಅದನ್ನು ಕೈಬಿಟ್ಟು ಹೊರಟು ಹೋಗಿದ್ದಾರೆ.

ಭಗವಂತ್ ಎಂಬುವರಿಗೆ ಸೇರಿದ ಮಹಾವೀರ್ ಮೆಡಿಕಲ್ ಶಾಪ್‌ನಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಸಮೀಪದ ಅಂಗಡಿಗಳಲ್ಲಿಯೂ ಕಳ್ಳತನ ಯತ್ನಿಸಿರುವ ಸಾಧ್ಯತೆಗಳಿವೆ. ಕಳೆದ ವಾರವಷ್ಟೇ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10 ಅಂಗಡಿಗಳ ಸರಣಿ ಕಳ್ಳತನವಾಗಿತ್ತು. ಇದೀಗ ವಿವೇಕಾನಂದ ಕಾಲೋನಿಯಲ್ಲಿ ಕಳ್ಳತನಕ್ಕೆ ವಿಫಲ ಯತ್ನಿಸಲಾಗಿದೆ. ಕಳ್ಳತನಕ್ಕೆ ಯತ್ನಿಸಿರೋ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Manjunath H D
Kshetra Samachara

Kshetra Samachara

28/08/2022 02:20 pm

Cinque Terre

101.63 K

Cinque Terre

1

ಸಂಬಂಧಿತ ಸುದ್ದಿ