ಹುಬ್ಬಳ್ಳಿ: ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಖಚಿತ ಮಾಹಿತಿಯ ಮೇರೆಗೆ ಉಪನಗರ ಠಾಣೆಯ ಪೊಲೀಸರು ದಾಳಿಯನ್ನು ಮಾಡಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬೆಳಗಾವಿ ಮೂಲದ 26 ವರ್ಷದ ಶುಭಂ ಹಾಗೂ ಮಹಾರಾಷ್ಟ್ರ ಮೂಲದ ಅಜಯ ಎಂಬಾತರು ಮಹಾರಾಷ್ಟ್ರದಿಂದ 570 ಗ್ರಾಂ ಗಾಂಜಾ ತೆಗೆದುಕೊಂಡು ಬಂದು ಹುಬ್ಬಳ್ಳಿಯ ನ್ಯೂ ಕಾಟನ್ ಮಾರ್ಕೆಟ್‌ನಲ್ಲಿನ ದಿ ಹೈವ್ ಬಾರ್ ಹತ್ತಿರ ಮಾರಾಟ ಮಾಡಲು ಯತ್ನಿಸಿದಾಗ ಖಚಿತ ಮಾಹಿತಿ ಮೇರೆಗೆ ಉಪನಗರ ಠಾಣೆಯ ಇನ್ಸ್ಪೆಕ್ಟರ್ ರವಿಚಂದ್ರ ನೇತೃತ್ವದ ತಂಡ ದಾಳಿ ಮಾಡಿದ ಸಂದರ್ಭದಲ್ಲಿ ಅಜಯ್ ತಪ್ಪಿಸಿಕೊಂಡು, ಶುಭಂ ಎಂಬಾತ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಸದ್ಯ ಆರೋಪಿ ಶುಭಂನಿಂದ ಗಾಂಜಾ ಮಾರಾಟ ಮಾಡಲು ಬಳಸಿದ ಬೈಕ್ ಹಾಗೂ 570 ಗ್ರಾಂ ಗಾಂಜಾ ವಶಕ್ಕೆ ಪಡೆದು, ಉಪನಗರ ಪೊಲೀಸ್ ಠಾಣೆಯಲ್ಲಿ ಆರೋಪಿಯ ಮೇಲೆ ಎನ್‌ಡಿಪಿಎಸ್ ಪ್ರಕರಣ ದಾಖಲಿಸಿದ್ದಲ್ಲದೇ, ಪರಾರಿಯಾದ ಅಜಯ್ ಪತ್ತೆಗೆ ಜಾಲ ಬೀಸಿದ್ದಾರೆ.
Kshetra Samachara
22/08/2022 09:27 pm