ಧಾರವಾಡ: ಗ್ರಾಹಕರ ಸೋಗಿನಲ್ಲಿ ಬಟ್ಟೆ ಅಂಗಡಿಗೆ ಹೋದ ಯುವತಿಯೊಬ್ಬಳು ಬಟ್ಟೆ ಕದ್ದುಕೊಂಡು ಪರಾರಿಯಾಗಿದ್ದಾಳೆ. ಈ ಘಟನೆ ಧಾರವಾಡದ ಟಿಕಾರೆ ರಸ್ತೆಯಲ್ಲಿ ನಡೆದಿದೆ.
ಟಿಕಾರೆ ರಸ್ತೆಯಲ್ಲಿರುವ ನಾಗರಾಜ ಡ್ರೆಸಿಸ್ ಎಂಬ ಅಂಗಡಿಗೆ ಹೋದ ಯುವತಿಯೊಬ್ಬಳು, ಅಂಗಡಿ ಸಿಬ್ಬಂದಿಯಿಂದ ಮೊದಲಿಗೆ ಒಂದು ಡ್ರೆಸ್ ತರಿಸಿಕೊಂಡಿದ್ದಾಳೆ. ಅಂಗಡಿಯ ಮಹಿಳಾ ಸಿಬ್ಬಂದಿ ಒಳಗಡೆ ಹೋದ ನಂತರ ಆ ಡ್ರೆಸ್ ತೆಗೆದುಕೊಂಡು ಹೊರಗಡೆ ಹೋದ ಆ ಯುವತಿ, ಮತ್ತೆ ವಾಪಸ್ ಬಂದು ಮತ್ತೊಂದು ಡ್ರೆಸ್ ತೆಗೆದುಕೊಂಡು ಪರಾರಿಯಾಗಿದ್ದಾಳೆ. ಈ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/08/2022 11:04 pm