ನವಲಗುಂದ : ನವಲಗುಂದ ತಾಲೂಕಿನ ಯಮನೂರ ಗ್ರಾಮ ಪಂಚಾಯತಿಯ ಕುಮಾರಗೊಪ್ಪ ಗ್ರಾಮದ ಬಾಗಿ ಲೇಔಟ್‌ನಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಸರಕಾರದ ಲಕ್ಷಾಂತರ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ, ನವಲಗುಂದ ತಾಲೂಕಾ ಕರುನಾಡು ವಿಜಯಸೇನೆ ಸಂಘಟನೆಯಿಂದ ಧಾರವಾಡ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಹಶೀಲ್ದಾರ್ ಅನಿಲ ಬಡಿಗೇರ್ ಮೂಲಕ ಮನವಿ ಸಲ್ಲಿಸಿದರು.
ಲಕ್ಷಾಂತರ ಹಣವನ್ನು ದುರುಪಯೋಗಪಡಿಸಿಕೊಂಡ ತಾ.ಪಂ.ಅಧಿಕಾರಿ ಮತ್ತು ಗ್ರಾ.ಪಂ. ಪಿ.ಡಿ.ಓ. ಇವರ ಮೇಲೆ ಸೂಕ್ತ ಕ್ರಮ ಕೈಗೊಂಡು ತನಿಖಾಧಿಕಾರಿಗಳನ್ನು ನೇಮಿಸಿ, ಇವರ ಅಕ್ರಮವನ್ನು ವಾರದೊಳಗೆ ಬಯಲಿಗೇಳೆದು ಸರಕಾರದ ಹಣ ದುರುಪಯೋಗ ಪಡಿಸಿಕೊಂಡ ಬಗ್ಗೆ ಸ್ಪಷ್ಟಪಡಿಸಬೇಕು.
ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ನವಲಗುಂದ ತಾಲೂಕಾ ಕರುನಾಡು ವಿಜಯಸೇನೆ ಸಂಘಟನೆ ವತಿಯಿಂದ ತಾಲೂಕ ಪಂಚಾಯತಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಳ್ಳಲಾಗುವುದು ಎಂದು ತಾಲೂಕಾ ಅಧ್ಯಕ್ಷ ಅರುಣ್ ಸುಣಗಾರ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರುನಾಡ ವಿಜಯ ಸೇನೆ ಧಾರವಾಡ ಜಿಲ್ಲಾ ಯುವ ಘಟಕ ಅಧ್ಯಕ್ಷ ಕುಮಾರ ಲಕ್ಕಮ್ಮನವರು, ತಾಲೂಕ ಗೌರವ ಅಧ್ಯಕ್ಷ ಮುತ್ತಣ್ಣ ದೊಡ್ಡಮನಿ, ನೀಲಪ್ಪ ಹೊಸರಣ್ಣವರ ,ರಾಮಜಿ ಕುಳಗೇರಿ ಇತರರು ಉಪಸ್ಥಿತರಿದ್ದರು.
Kshetra Samachara
12/08/2022 01:54 pm