ಕುಂದಗೋಳ: ಹಾಲಿನ ವ್ಯಾಪಾರದ ಜೊತೆ ಖೋಟಾ ನೋಟಿನ ದಂಧೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಖಚಿತ ಮಾಹಿತಿಯ ಮೇರೆಗೆ ಕುಂದಗೋಳ ಠಾಣೆಯ ಇನ್ಸ್ಪೆಕ್ಟರ್ ಮಾರುತಿ ಗುಳಾರಿ ನೇತೃತ್ವದ ತಂಡ ಬಂಧಿಸಿದೆ.
ಕುಂದಗೋಳ ಪಟ್ಟಣದ ಮಾರ್ಕೆಟ್ ಬಳಿ ಇರುವ ಆದಿತ್ಯ ಮಿಲ್ಕ ಹಾಲಿನ ಅಂಗಡಿ ನಡೆಸುತ್ತಿದ್ದ ಸಾಗರ ಕಾಶಪ್ಪನವರ ಹಾಗೂ ಆತನ ಮೂರು ಜನ ಸಹಚರರನ್ನು ಬಂಧಿಸಿ ಆರೋಪಿಗಳಿಂದ 500 ರೂಪಾಯಿ ಮುಖಬೆಲೆಯ 47 ಖೋಟಾ ನೋಟು (23500) ರೂಪಾಯಿ ವಶಕ್ಕೆ ಪಡೆಯಲಾಗಿದೆ.
ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಂದ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
Kshetra Samachara
08/08/2022 01:21 pm