ಧಾರವಾಡ: ಧಾರವಾಡದ ಭೂಸಪ್ಪ ಚೌಕ್ ಬಳಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಪಾಲಿಕೆಯ ಕಾಂಗ್ರೆಸ್ ಸದಸ್ಯ ಗಣೇಶ ಮುಧೋಳ ಸೇರಿದಂತೆ 10 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಧಾರವಾಡದ ಭೂಸಪ್ಪ ಚೌಕ್ ಬಳಿ 10 ಜನರ ತಂಡ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರು. ಈ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಗಣೇಶ ಮುಧೋಳ ಸೇರಿದಂತೆ 10 ಜನರನ್ನು ಬಂಧಿಸಿ, 1.2 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ.
ನಂತರ ಸಿಸಿಬಿ ಪೊಲೀಸರು ಶಹರ ಠಾಣೆಗೆ ಈ ಸಂಬಂಧ ದೂರು ನೀಡಿದ್ದು, ಸದ್ಯ ಆರೋಪಿತರನ್ನು ವಶಕ್ಕೆ ಪಡೆದಿರುವ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
Kshetra Samachara
06/08/2022 10:20 pm