ಹುಬ್ಬಳ್ಳಿ: ಕಲಬುರಗಿ ಬಿಎಸ್ಎಫ್ ನ ಮಾಜಿ ಯೋಧರೊಬ್ಬರು, ಪತ್ನಿಯೊಂದಿಗೆ ಕಲಬುರಗಿಯಿಂದ ಹುಬ್ಬಳ್ಳಿಗೆ ಬರಲೆಂದು ಬುಧವಾರ ರಾತ್ರಿ ಹೈದರಾಬಾದ್ - ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲು ಹತ್ತಿ ಸಂಬಂಧಿಕರನ್ನು ಮಾತನಾಡಿಸುವಷ್ಟರಲ್ಲಿ ಕಳ್ಳರು ಅಂದಾಜು 3,37,713 ರೂ. ಮೌಲ್ಯದ ಚಿನ್ನಾಭರಣ, ರೇಷ್ಮೆ ಸೀರೆಗಳಿದ್ದ ಸ್ಟಾಯ್ ಬ್ಯಾಗ್ ಕಳ್ಳತನ ಮಾಡಿದ್ದಾರೆ.
ಧಾರವಾಡ ಸರಸ್ವತಪುರ ರೆಡ್ಡಿ ಕಾಲೋನಿಯ ಚಂದ್ರಶೇಖರಗೌಡ ಎಂಬುವರ ರೈಲ್ವೆ ನಿಲ್ದಾಣದಲ್ಲಿ ಚಿನ್ನಾಭರಣ, ರೇಷ್ಮೆ ಸೀರೆಗಳಿದ್ದ ಬ್ಯಾಗ್ ಕಳೆದುಕೊಂಡವರು. ಇವರು ಸೀಟ್ ನ ಕೆಳಗೆ ಸ್ಟಾಯ್ ಬ್ಯಾಗ್ ಇಟ್ಟು ಸಂಬಂಧಿಕರಿಗೆ ಕಿಟಕಿಯಲ್ಲೇ ಮಾತನಾಡಿಸಿ, ಬೀಳ್ಕೊಟ್ಟು ನಂತರ ಸೂಟ್ ಕೇಸ್ ನೋಡುವಷ್ಟರಲ್ಲಿ ಕಳ್ಳರು ಅದನ್ನ ಎಗರಿಸಿದ್ದಾರೆ.
ಬ್ಯಾಗ್ ನಲ್ಲಿ ಅಂದಾಜು 2.07 ಲಕ್ಷ ರೂ . ಮೌಲ್ಯದ 34 ಗ್ರಾಂ ನೆಕ್ಲೆಸ್, 1 ಲಕ್ಷ ರೂ. ಮೌಲ್ಯದ 20 ಗ್ರಾಂ ಕಿವಿಯೋಲೆ, ಉಂಗುರ ಹಾಗೂ ಎಂಟು ಹೊಸ ಸಿಲ್ಕ್ ಸೀರೆಗಳು, ಆರು ಜೊತೆ ಹೊಸ ಪ್ಯಾಂಟ್ - ಶರ್ಟ್ ಇದ್ದವು. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
06/08/2022 11:53 am