ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 37 ವರ್ಷ ವಯಸ್ಸಾದರೂ ಮದುವೆಯಾಗಲಿಲ್ಲ ಎಂದು ಕೆರೆಗೆ ಹಾರಿ ಆತ್ಮಹತ್ಯೆ

ಹುಬ್ಬಳ್ಳಿ: ವಯಸ್ಸು 37 ವರ್ಷ ಕಳೆದರೂ ಮದುವೆ ಆಗಲಿಲ್ಲ ಎಂದು ಮಾನಸಿಕವಾಗಿ ನೊಂದ ವ್ಯಕ್ತಿಯೊಬ್ಬ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ವಿದ್ಯಾನಗರದ ಲೋಕಪ್ಪನ ಹಕ್ಕಲದ ನಿವಾಸಿಯಾದ ರಾಜು ಅಮ್ಮಿನಭಾವಿ ಎಂಬಾತ ತನಗೆ 37 ವರ್ಷ ಕಳೆದರೂ ಕೂಡಾ ಮದುವೆ ಆಗಲಿಲ್ಲ ಎಂದು ಮಾನಸಿಕವಾಗಿ ನೊಂದಿದ್ದ. ಅಷ್ಟೇ ಅಲ್ಲದೇ ಕಳೆದ ಎರಡು ವರ್ಷಗಳ ಹಿಂದೆ ಕೂಡಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆಗ ಮನೆಯವರು ರಾಜುನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

ಆದ್ರೆ ಕಳೆದ ಎರಡು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ರಾಜು ಉಣಕಲ್ ಕೆರೆಗೆ ಹಾರಿದ್ದ. ಇಂದು ಆತನ ಶವ ಪತ್ತೆಯಾಗಿದ್ದಾನೆ. ಶವ ಪರಿಶೀಲಿಸಿದಾಗ ಆಧಾರ ಕಾರ್ಡ್ ಸಿಕ್ಕಿದೆ. ಈ ಮೂಲಕ ಆತನ ಕುಟುಂಬಸ್ಥರನ್ನು ಸಂಪರ್ಕಿಸಲಾಗಿದೆ. ಪೊಲೀಸರಿಗೆ ರಾಜುವಿನ ಅಣ್ಣ ಈ ಹಿಂದೆ ನಡೆದ ಘಟನೆಗಳು ಹಾಗೂ ಆತ ಮಾನಸಿಕವಾಗಿ ನೊಂದಿದ್ದ ಮಾಹಿತಿಯನ್ನು ಹೇಳಿದ್ದಾನೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Edited By : Manjunath H D
Kshetra Samachara

Kshetra Samachara

04/08/2022 07:17 pm

Cinque Terre

41.79 K

Cinque Terre

6

ಸಂಬಂಧಿತ ಸುದ್ದಿ