ಕುಂದಗೋಳ: ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕೋಸ್ಕರ ಓಸಿ ಸಂಖ್ಯೆ ಬರೆಯುತ್ತಿದ್ದ ವ್ಯಕ್ತಿಯನ್ನು ಕುಂದಗೋಳ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಟದೂರ ಗ್ರಾಮದ ಮೌಲಾಸಾಬ್ ಪಿರಸಾಬ್ ಹಾರೋಬಿಡಿ ಎಂಬಾತ ಗ್ರಾಮ ಪಂಚಾಯಿತಿ ಕಟ್ಟಡದ ಬಳಿ ಕಳೆದ ಶನಿವಾರ ಓಸಿ ಬರೆಯುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಓಪೋ ಕಂಪನಿಯ ಮೊಬೈಲ್, ಸ್ಯಾಮ್ಸಂಗ್ ಕಂಪನಿ ಕೀ ಪ್ಯಾಡ್ ಮೊಬೈಲ್ ಹಾಗೂ 1,500 ರೂಪಾಯಿ ನಗದು ಹಣ ಸೇರಿ ಓಸಿ ಬರೆಯುತ್ತಿದ್ದ ಚೀಟಿ ಹಾಗೂ ಬಾಲ್ ಪೆನ್ ವಶಪಡಿಸಿಕೊಂಡಿದ್ದಾರೆ.
ಈ ವಿಚಾರವಾಗಿ ತನಿಖೆ ತೀವ್ರಗೊಳಿಸಿದ ಪೊಲೀಸರು ಬಂಧಿತನಿಂದ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ.
Kshetra Samachara
03/08/2022 11:34 am