ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗೂಡ್ಸ್ ವಾಹನದಲ್ಲಿ ಕರುಗಳ ಸಾಗಾಟ; ತಡೆದ ಭಜರಂಗ ದಳ

ಹುಬ್ಬಳ್ಳಿ: ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಐದು ಆಕಳು ಕರುಗಳನ್ನು ಭಜರಂಗದಳದ ಕಾರ್ಯಕರ್ತರು ಹಿಡಿದು ವಿದ್ಯಾನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿದ್ಯಾನಗರದ ಆರ್ಟ್ಸ್ ಕಾಲೇಜು ಬಳಿ ಗೂಡ್ಸ್ ವಾಹನದಲ್ಲಿ ಐದು ಕರುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭಜರಂಗ ದಳದ ಕಾರ್ಯಕರ್ತರು ವಾಹನ ಹಿಡಿದು ವಿದ್ಯಾನಗರ ಪೊಲೀಸರಿಗೆ ಒಪ್ಪಿಸಿದರು.

ಸದ್ಯ ವಾಹನವನ್ನು ವಶಕ್ಕೆ ಪಡೆದ ವಿದ್ಯಾನಗರ ಠಾಣೆ ಪೊಲೀಸರು ಕರುಗಳನ್ನು ಕಸಾಯಿಖಾನೆಗೆ ಒಯ್ಯಲಾಗುತ್ತಿತ್ತೇ ಅಥವಾ ಇಲ್ಲವೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

30/07/2022 08:45 pm

Cinque Terre

79.87 K

Cinque Terre

1

ಸಂಬಂಧಿತ ಸುದ್ದಿ