ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಣ ಕೊಟ್ಟರೂ ಮುಂಬಡ್ತಿ ನೀಡಿಲ್ಲ: ಸಿಸಿಎಫ್ ವಿರುದ್ಧ ತಿರುಗಿಬಿದ್ದ ಅರಣ್ಯ ರಕ್ಷಕರು

ಧಾರವಾಡ: ಧಾರವಾಡ ವಲಯದ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ ಕೆಲಸ ಮಾಡುತ್ತಿರುವ 15 ಜನರಿಗೆ ನೀಡಲಾಗಿದ್ದ ಮುಂಬಡ್ತಿ ಆದೇಶವನ್ನು ವಾಪಸ್ ಪಡೆದಿದ್ದು, ಈ ಇಲಾಖೆಯಲ್ಲಿ ದೊಡ್ಡ ಗೋಲ್‌ಮಾಲ್ ನಡೆದಂತೆ ಕಾಣುತ್ತಿದೆ. ಈ ಆದೇಶ ಹಿಂಪಡೆದಿದ್ದರಿಂದ ಅರಣ್ಯ ರಕ್ಷಕರು ಇದೀಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿರುದ್ಧ ಕಂಗಾಲಾಗಿದ್ದಾರೆ.

ಮೇ ತಿಂಗಳ 23 ರಂದು 15 ಜನ ಅರಣ್ಯ ರಕ್ಷಕರಿಗೆ ಮುಂಬಡ್ತಿ ನೀಡಿ ಸಿಸಿಎಫ್ ಅವರು ಆದೇಶ ಹೊರಡಿಸಿದ್ದರು. ಈ ವೇಳೆ ಸಿಸಿಎಫ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೊಹ್ಮದ್ ಶರೀಫ್ ಬೂದಿಹಾಳ ಎಂಬಾತ 15 ಜನ ಅರಣ್ಯ ರಕ್ಷಕರಿಗೆ ಫೋನ್ ಮಾಡಿ ನೀವು 30 ಸಾವಿರ ಕೊಡಬೇಕು ಇಲ್ಲದೇ ಹೋದರೆ ನಿಮಗೆ ಮುಂಬಡ್ತಿ ನೀಡಲಾಗುವುದಿಲ್ಲ. ಅದನ್ನು ವಾಪಸ್ ಪಡೆಯಲಾಗುವುದು ಎಂದು ಬೆದರಿಕೆ ಹಾಕಿದ್ದಾನೆ. ಎಲ್ಲಿ ತಮಗೆ ಮುಂಬಡ್ತಿ ಸಿಗುವುದಿಲ್ಲ ಎಂದು ತಿಳಿದ ಅರಣ್ಯ ರಕ್ಷಕರು ಆತನಿಗೆ ತಲಾ 30 ಸಾವಿರ ಹಣ ಕೊಟ್ಟಿದ್ದಾರೆ. ಇದಾದ ಬಳಿಕ ಅರಣ್ಯ ರಕ್ಷಕರಿಗೆ ಮುಂಬಡ್ತಿಯನ್ನೇ ನೀಡದೇ ಸಿಸಿಎಫ್ ಅವರು ಬಡ್ತಿ ಆದೇಶವನ್ನು ವಾಪಸ್ ಪಡೆದುಕೊಂಡಿದ್ದಾರೆ.ಇದರಿಂದ ಕಂಗಾಲಾದ ಅರಣ್ಯ ರಕ್ಷಕರು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿ, ಸಿಸಿಎಫ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಅರಣ್ಯ ರಕ್ಷಕರಿಗೆ ಮುಂಬಡ್ತಿ ನೀಡಲಾಗುವುದು ಎಂದು ಮೇ.23 ರಂದು ಆದೇಶ ಹೊರಡಿಸಲಾಗಿತ್ತು. ಎಲ್ಲರಿಂದಲೂ ಮೊಹ್ಮದ್ ಬೂದಿಹಾಳ ಹಣ ವಸೂಲಿ ಮಾಡಿದ ನಂತರ ಜುಲೈ 18 ರಂದು ತಮ್ಮ ಆದೇಶವನ್ನು ಸಿಸಿಎಫ್ ಅವರು ವಾಪಸ್ ಪಡೆದುಕೊಂಡಿದ್ದಾರೆ.

ಇನ್ನು ಮೊಹ್ಮದ್ ಬೂದಿಹಾಳ ವಿರುದ್ಧ ಸಿಸಿಎಫ್ ಯಾವುದೇ ಗಂಭೀರ ಕ್ರಮ ಜರುಗಿಸಿಲ್ಲ. ಆದರೆ, ಅವರು ಮಾತ್ರ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು, ಮುಂಬಡ್ತಿ ಆದೇಶವನ್ನು ಪರಿಷ್ಕರಿಸಲು ಕೋರಿದ್ದರ ಮೇರೆಗೆ ಮುಂಬಡ್ತಿ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಇದೀಗ ನೊಂದ ಅರಣ್ಯ ರಕ್ಷಕರು ನ್ಯಾಯ ದೊರಕಿಸಿಕೊಡುವಂತೆ ಮಾಧ್ಯಮಗಳ ಮೊರೆ ಇಟ್ಟಿದ್ದಾರೆ.

Edited By : Shivu K
Kshetra Samachara

Kshetra Samachara

20/07/2022 04:46 pm

Cinque Terre

44.68 K

Cinque Terre

1

ಸಂಬಂಧಿತ ಸುದ್ದಿ