ಹುಬ್ಬಳ್ಳಿ: ಚೌಕಾಬಾರ ಆಟದಲ್ಲಿ ತನ್ನ ಎದುರಾಳಿಗೆ ಸಹಾಯ ಮಾಡಿದಕ್ಕೆ, ಕುಪಿತಗೊಂಡ ವ್ಯಕ್ತಿಯೋರ್ವ ಚಾಕು ಇರಿದ ಘಟನೆ, ನಗರದ ಯಲ್ಲಾಪುರ ಓಣಿಯ ತತ್ತಿಪೂರ ಚಾಳ ಬಳಿ ತಡರಾತ್ರಿ ನಡೆದಿದೆ.
ಯಲ್ಲಾಪುರ ಓಣಿಯ ನಿವಾಸಿ ಆಫ್ತಾಬ್ ಬಾಬುಸಾಬ್ ಯಲಿಗಾರ, ಸಾಹಿಲ್ ಮಹ್ಮದ್ ರಫೀಕ್ ತನ್ನ ಗೆಳೆಯ ಹುಸೇನ್ ಆಟಕ್ಕೆ ಸಹಾಯ ಮಾಡುತ್ತಿದ್ದಾಗ, ಕುಪಿತಗೊಂಡ ಆಫ್ತಾಬ್ ಬಾಬುಸಾಬ್ ಯಲಿಗಾರ, ಸಾಹಿಲ್ ಎಡಗೈ ಭುಜಕ್ಕೆ ಚಾಕು ಇರಿದಿದ್ದು ಎಡ ಪಕ್ಕಡಿಗೆ ಹೊಡೆದು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ.
ಗಾಯಾಳು ಸಾಹಿಲ್ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಘಂಟೀಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
18/07/2022 11:41 am