ಅಳ್ನಾವರ:ಕಳೆದ ಏಪ್ರಿಲ್ 4ರಂದು ಅಳ್ನಾವರ ರೈಲು ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಡಿಲಕ್ಸ್ ಬೈಕ್ ಕಳ್ಳತನ ಹಾಗೂ ಲಕ್ಷಾಂತರ ಮೌಲ್ಯದ ಸೆಂಟ್ರಿಂಗ್ ಪ್ಲೇಟ್ ಕಳ್ಳತನ ಮಾಡಿದ್ದ ಕಳ್ಳರನ್ನು ಬಂಧಿಸಲಾಗಿದೆ.ರಮೇಶ ಬಾಬು ದುರ್ಗಿಮುರ್ಗಿ,ಅರವಿಂದ ಗೋವಿಂದ ವಡ್ಡರ, ವಿಶಾಲ್ ಗೋವಿಂದ ವಡ್ಡರ ಅನ್ನೋ ಮೂವರು ಕಳ್ಳರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 20ಸಾವಿರ ಮೌಲ್ಯದ ಬೈಕ್,ಗರಗ ಪೊಲೀಸ್ ಠಾಣೆ,ಧಾರವಾಡ ಗ್ರಾಮೀಣ ಠಾಣೆ,ಹುಬ್ಬಳ್ಳಿ ಗ್ರಾಮೀಣ ಠಾಣೆ, ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆಂಟ್ರಿಂಗ್ ಪ್ಲೇಟ್ ಗಳನ್ನು ಕಳ್ಳತನ ಮಾಡಿದ್ದರು.8ಲಕ್ಷದ 40ಸಾವಿರ ಮೌಲ್ಯದ 840 ಪ್ಲೇಟ್ ಗಳು,3 ಲಕ್ಷ ಮೌಲ್ಯದ ಟಾಟಾ ಇಂಟ್ರಾ ಗೂಡ್ಸ್ ವಾಹನ ಸೇರಿದಂತೆ ಒಟ್ಟು 11 ಲಕ್ಷದ 60ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಸ್,ಪಿ ಲೋಕೇಶ್ ಜಗಲಾಸರ್,ಉಪ ಅಧೀಕ್ಷರಾದ ಎ,ಬಿ ಸುಂಕದ ಇವರ ಮಾರ್ಗದರ್ಶನದಲ್ಲಿ ಸಿಪಿಐ ಎಸ್.ಸಿ.ಪಾಟೀಲ್ ಅವರ ನೇತೃತ್ವದಲ್ಲಿ ಅಳ್ನಾವರ ಪಿಎಸ್ಐ ಪ್ರವೀಣ್ ನೇಸರಗಿ ಹಾಗೂ ಸಿಬ್ಬಂದಿ ನಾಗರಾಜ ಹಾಲವರ, ಮಹಾಂತೇಶ ಮಬ್ಬಿನ್,ಗಂಗಾಧರ ಸನ್ನಮೇಟಿ,ಕೆ.ಎಂ ಘಟ್ಟದ,ವೈ.ಎಚ್ ಹಂಚಿನಮಣಿ ಅವರ ತಂಡ ಕತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ.
Kshetra Samachara
16/07/2022 01:35 pm