ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ನೇಣು ಬಿಗಿದುಕೊಂಡು ಉದ್ಯಮಿ ಆತ್ಮಹತ್ಯೆ

ಅಣ್ಣಿಗೇರಿ: ಪಟ್ಟಣದ ರುದ್ರಂಗಿ ಆಗ್ರೋ ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ಮಹೇಶ್ ಸೂಡಿ (39) ಕೊಟ್ಟ ಸಾಲ ಮರಳಿ ಬಾರದೆ ಇದ್ದಿದ್ದರಿಂದ ಮನನೊಂದು ತಮ್ಮ ಕೃಷಿಚಟುವಟಿಕೆಗಳ ತಯಾರಿಸುವ ಸ್ಥಳದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಪಟ್ಟಣದಲ್ಲಿ ನಡೆದಿದೆ.

ರೈತರಿಗೆ ಉಪಯೋಗವಾಗುವ ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿಕೊಂಡು ಜೀವನ ನಡೆಸುತ್ತಿದ್ದ ಹಾಗೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಇವರ ಆತ್ಮಹತ್ಯೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

ಇನ್ನೂ ಮೃತ ಮಹೇಶ ಸೂಡಿ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ತಮಗೆ ಮರಳಿ ಸಾಲ ನೀಡುವವರ ಹೆಸರನ್ನು ತಮ್ಮ ಡೆತ್ ನೋಟಿನಲ್ಲಿ ಬರೆದಿಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅಣ್ಣಿಗೇರಿ ಪೊಲೀಸ್ ಠಾಣೆಯ ಪಿಎಸ್ಐ ಲಾಲ್ ಸಾಬ್ ಜೂಲಕಟ್ಟಿ ಅವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

15/07/2022 11:48 am

Cinque Terre

47.62 K

Cinque Terre

2

ಸಂಬಂಧಿತ ಸುದ್ದಿ