ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

SBI ಬ್ಯಾಂಕ್‌ಗೆ ಬಿತ್ತು 1.10 ಲಕ್ಷ ದಂಡ

ಧಾರವಾಡ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲದ ಬಾಕಿ ಅಥವಾ ಬೇರೆ ಯಾವುದೇ ರೀತಿಯ ಹಣ ಕೊಡುವುದು ಬಾಕಿ ಇರದಿದ್ದರೂ ನಿಮ್ಮ ಹೆಸರಿನಲ್ಲಿ ನಮ್ಮ ಬ್ಯಾಂಕಿನಲ್ಲಿ ಸಾಲದ ಬಾಕಿ ಇದೆ ಮತ್ತು ನೀವು ಸುಸ್ಥಿ ಬಾಕಿದಾರ ಇದ್ದೀರಿ ನೀವು ಲೋಕ ಅದಾಲತ್‍ನಲ್ಲಿ ಅಥವಾ ನಮ್ಮ ಬ್ಯಾಂಕಿಗೆ ಬಂದು ಮಾತನಾಡಿ, ಸಾಲದ ಹಣ ಕಟ್ಟುವಂತೆ ಧಾರವಾಡದ ಎಚ್.ಡಿ.ಎಂ.ಸಿ ಸರ್ಕಲ್‍ನ ಮತ್ತು ಹುಬ್ಬಳ್ಳಿ ಕೇಶ್ವಾಪುರದ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬ್ಯಾಂಕನಿಂದ ಧಾರವಾಡದ ಯಾದಗಿರಿ ಚಾಳಿನ ಕರುಣಾಕರ ಚಂದ್ರಯ್ಯ ಶೆಟ್ಟಿ ಎನ್ನುವವರಿಗೆ ಹಲವಾರು ಬಾರಿ ನೋಟಿಸು ಕೊಟ್ಟು ಒತ್ತಾಯ ಮಾಡುತ್ತಿದ್ದರಿಂದ ಮತ್ತು ತಮಗೆ ಸುಸ್ಥಿ ಬಾಕಿದಾರ ಎಂದು ಬ್ಯಾಂಕಿನವರು ಹೇಳಿದ್ದರಿಂದ ತಮ್ಮ ಗೌರವಕ್ಕೆ ಚ್ಯುತಿ ಬಂದಿದೆ ಮತ್ತು ತಮಗೆ ಬ್ಯಾಂಕಿನವರಿಂದ ಸೇವಾ ನ್ಯೂನ್ಯತೆ ಆಗಿದೆ ಎಂದು ಹೇಳಿ ಅವರ ಕ್ರಮವನ್ನು ಪ್ರಶ್ನಿಸಿ ಕರುಣಾಕರ ಶೆಟ್ಟಿ ಅವರು ಧಾರವಾಡದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪರಿಹಾರ ಕೇಳಿ ದೂರು ದಾಖಲಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಆಯೋಗ ಯಾವುದೇ ರೀತಿಯ ಸಾಲ ಕೊಡುವುದು ಬಾಕಿ ಇರದಿದ್ದರೂ ಗ್ರಾಹಕ ಕರುಣಾಕರ ಶೆಟ್ಟಿಗೆ ಸುಸ್ಥಿ ಬಾಕಿದಾರ ಇತ್ಯಾದಿಯಾಗಿ ಹೆಸರಿಸಿ, ಹಲವು ಬಾರಿ ನೋಟಿಸು ನೀಡಿರುವುದರಿಂದ ಗ್ರಾಹಕನ ವರ್ಚಸ್ಸಿಗೆ ಕುಂದು ಉಂಟಾಗಿದೆ. ಇದರ ಪರಿಣಾಮವಾಗಿ ಸೇವಾ ನ್ಯೂನ್ಯತೆ ಆಗಿದೆ ಎಂದು ಅಭಿಪ್ರಾಯಪಟ್ಟು ಸ್ಟೇಟ್ ಬ್ಯಾಂಕನವರು ದೂರುದಾರ ಕರುಣಾಕರ ಶೆಟ್ಟಿಗೆ 1.10 ಲಕ್ಷ ಪರಿಹಾರ ಕೊಡಬೇಕು ಎಂದು ತೀರ್ಪು ನೀಡಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಎ.ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ತೀರ್ಪು ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

14/07/2022 09:50 pm

Cinque Terre

26.14 K

Cinque Terre

0

ಸಂಬಂಧಿತ ಸುದ್ದಿ