ಹುಬ್ಬಳ್ಳಿ: ಆನ್ಲೈನ್‌ನಲ್ಲಿ ಖರೀದಿಸಿ ಬಟ್ಟೆಯ ಕ್ವಾಲಿಟಿ ಸರಿ ಇಲ್ಲದ ಕಾರಣ, ಗೂಗಲ್‌ನಲ್ಲಿ ಆನ್ಲೈನ್ ವೆಬ್‌ಸೈಟ್‌ನಲ್ಲಿದ್ದ ಕಂಪನಿ ನಕಲಿ ಕಸ್ಟಮರ್ ಕೇರ್‌ಗೆ ಕರೆ ಮಾಡಿದ ವಿದ್ಯಾರ್ಥಿಯ ಬ್ಯಾಂಕ್ ಖಾತೆಯಿಂದ 79 ಸಾವಿರ ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ಹೌದು. ಕೃಷಿ ವಿವಿ ವಿದ್ಯಾರ್ಥಿನಿ ದಾನೇಶ್ವರಿ ಎಂಬುವರೇ ವಂಚನೆಗೊಳಗಾದವರು. ಆನ್ಲೈನ್ ಕಂಪನಿಯ ಕಸ್ಟಮರ್ ಕೇರ್ ನಂಬರ್ ಅನ್ನು ಗೂಗಲ್‌ನಲ್ಲಿ ಹುಡುಕಿ ಕರೆ ಮಾಡಿದ್ದ ವಿದ್ಯಾರ್ಥಿನಿಯನ್ನು, ತಾವು ಲೇಡಿವೈಬಲ್ಸ್ ಕಂಪನಿಯ ಕಸ್ಟಮರ್ ಕೇರ್ ಅಧಿಕಾರಿಗಳೆಂದು ನಂಬಿಸಿದ್ದಾರೆ.
ಬಳಿಕ ಹಣ ರಿಫಂಡ್ ಮಾಡಲು ಲಿಂಕ್ ಕಳುಹಿಸಿ ಅವರ ಖಾತೆಯಿಂದ 79,900 ರೂ ವರ್ಗಾಯಿ ಸಿಕೊಂಡಿದ್ದಾರೆ. ಈ ಬಗ್ಗೆ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
13/07/2022 01:58 pm