ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆನ್‌ಲೈನ್ ಖರೀದಿಗೆ ಹೋಗಿ ಮೋಸ ಹೋದಳು ಹುಡುಗಿ

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ಖರೀದಿಸಿದ್ದ ಕುರ್ತಾಗಳು ಗುಣಮಟ್ಟದ್ದಾಗಿಲ್ಲ ಎಂದು ವಾಪಸ್ ಕಂಪನಿಗೆ ಮರಳಿಸಲು ಮುಂದಾಗಿದ್ದ ವಿದ್ಯಾರ್ಥಿನಿಯೊಬ್ಬರಿಂದ 79,900 ರೂಪಾಯಿ ವರ್ಗಾಯಿಸಿಕೊಂಡು ವಂಚಿಸಲಾಗಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ದಾನೇಶ್ವರಿ ಎಂಬುವರು ಆನ್‌ಲೈನ್‌ ವೆಬ್‌ಸೈಟ್‌ವೊಂದರ ಮೂಲಕ ಕುರ್ತಾಗಳನ್ನು ಖರೀದಿಸಿದ್ದರು. ಅವುಗಳ ಗುಣಮಟ್ಟ ಸರಿ ಇಲ್ಲವೆಂದು ವಾಪಸ್ ನೀಡುವುದಕ್ಕಾಗಿ ಗೂಗಲ್‌ನಲ್ಲಿ ಕಸ್ಟಮರ್ ಕೇರ್ ಹುಡುಕಿದ್ದರು. ಅಲ್ಲಿ ದೊರೆತನಂಬರ್‌ಗೆ ಕರೆ ಮಾಡಿದ್ದರು. ಕಂಪನಿಯವರಂತೆ ನಟಿಸಿದ ವಂಚಕರು, ಮೊದಲು ಹಣ ಮರಳಿಸುವುದಾಗಿ ಮಾಡುವುದಾಗಿ ನಂಬಿಸಿದ್ದರು. ನಂತರ ಲಿಂಕ್‌ಗಳನ್ನು ಕಳುಹಿಸಿ, ಎಸ್‌ಎಂಎಸ್‌ಗಳನ್ನು ಕಳುಹಿಸಿಕೊಂಡು ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

13/07/2022 11:02 am

Cinque Terre

22.25 K

Cinque Terre

0

ಸಂಬಂಧಿತ ಸುದ್ದಿ