ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗುರೂಜಿ ಹಂತಕರು ಮತ್ತೆ ಖಾಕಿ ಕೈ ಸೆರೆ; ರಕ್ತದ ಕಲೆಯಲ್ಲಿ ಮತ್ತಷ್ಟು ಅನುಮಾನದ ಜ್ವಾಲೆ

ಹುಬ್ಬಳ್ಳಿ: ಇಡೀ ರಾಜ್ಯವೇ ಬೆಚ್ಚಿ ಬಿಳಿಸಿರುವ ಖ್ಯಾತ ಸರಳವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಹತ್ಯೆ ತನಿಖೆ ಇನ್ನೂ ಮುಗಿದಿಲ್ಲ. ಹತ್ಯೆ ದಿನದಂದ ಇಲ್ಲಿಯವರೆಗೆ ಸತತವಾಗಿ ಹಂತಕರನ್ನು ವಿಚಾರಣೆ ಮಾಡುತ್ತಿರುವ ಖಾಕಿಪಡೆ, ಆರೋಪಿಗಳಿಂದ ನಿಖರವಾಗಿ ಸತ್ಯವನ್ನು ಹೊರ ಎಳೆಯಲು ಹರಸಾಹಸಪಡುತ್ತಿದ್ದು, ಈಗ ಮತ್ತೆ ಆರು ದಿನ ಕಸ್ಟಡಿಗೆ ಪಡೆದಿದೆ.

ಹೌದು. ಹಾಡಹಗಲೇ ಖ್ಯಾತ ಸರಳವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆಯ ಬೆನ್ನು ಬಿದ್ದಿರುವ ಪೊಲೀಸರು, ಹತ್ಯೆ ನಿಖರ ಕಾರಣಕ್ಕಾಗಿ ಹಂತಕರಾದ ಮಹಾಂತೇಶ ಮತ್ತು ಮಂಜುನಾಥನ ಬೆನ್ನುಬಿದ್ದಿದ್ದಾರೆ. ಹತ್ಯೆ ದಿನದಿಂದ ಇಲ್ಲಿಯವರೆಗೆ ಸತತ ಏಳು ದಿನದಿಂದ ವಿಚಾರಣೆ ನಡೆಸುತ್ತಿರುವ ವಿದ್ಯಾನಗರ ಪೊಲೀಸರು, ಆರೋಪಿಗಳಿಂದ ಮಹತ್ವದ ಹೇಳಿಕೆಗಳನ್ನು ಹೊರ ಹಾಕಿಸಿದ್ದಾರೆ. ಆದರೆ ಇದರಿಂದ ಪೊಲೀಸ್ ಇಲಾಖೆ ತೃಪ್ತಿಗೊಂಡಿಲ್ಲ. ಕೇವಲ ಬೇನಾಮಿ ಆಸ್ತಿ ವಿಚಾರವಾಗಿ ಈ ಹತ್ಯೆ ಆಗಿಲ್ಲ, ಕೊಲೆಯ ಹಿಂದೆ ಬಹಳಷ್ಟು ಪ್ರಬಲವಾದ ಕಾರಣವಿದೆ ಎಂಬುದು ಪೊಲೀಸರ ಅನುಮಾನ.

ಸದ್ಯ ಆರು ದಿನ ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರು, ಇಂದು ಮತ್ತೆ ಆರೋಪಿಗಳನ್ನು ಹುಬ್ಬಳ್ಳಿ ಒಂದನೆಯ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಿಪಡಿಸಿತು. ಅಲ್ಲದೆ ಆರೋಪಿಗಳಿಂದ ಇನ್ನೂ ಮಹತ್ವ ಮಾಹಿತಿ ಪಡೆಯುವ ಉದ್ದೇಶದಿಂದ ಇನ್ನೂ 15 ದಿನ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಹ ಖಾಕಿಪಡೆ ಮಾಡಿತು. ಪೊಲೀಸರ ವಾದವನ್ನು ಆಲಿಸಿದ ನಾಯಾಧೀಶ ನಾಗೇಶ ನಾಯ್ಕ್ ಅವರು ಮತ್ತೆ ಆರು ದಿನ ಅಂದರೆ, ಜುಲೈ 18ರ ವರಿಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.

ಸದ್ಯ ಹತ್ಯೆ ಹಂತಕರನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಹಲವಾರು ಆಯಾಮದಿಂದ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಲ್ಲಿ ಈಗಾಗಲೇ ಸಾಕಷ್ಟು ಕುತೂಹಲಕಾರಿ ಮಾಹಿತಿ ಹೊರಬರುತ್ತಿದ್ದು, ಬೇನಾಮಿ ಆಸ್ತಿ ರಾಜಕೀಯ ವಲಯಕ್ಕೂ ಸಹ ಸುತ್ತಿಕೊಳ್ಳುವ ಅನುಮಾನ ಮೂಡಿದಿದೆ. ಹೀಗಾಗಿ ಆರೋಪಿಗಳಿಗೆ ನಿರಂತರವಾಗಿ ಡ್ರಿಲ್ ಮಾಡಿಸುತ್ತಿರುವ ಪೊಲೀಸರು ಮತ್ತಷ್ಟು ಸತ್ಯಗಳನ್ನು ಹೊರೆಗೆಳಿಯುವ ಸಾಧ್ಯತೆಯಿದೆ.

Edited By : Shivu K
Kshetra Samachara

Kshetra Samachara

13/07/2022 08:41 am

Cinque Terre

58.69 K

Cinque Terre

1

ಸಂಬಂಧಿತ ಸುದ್ದಿ