ಹುಬ್ಬಳ್ಳಿ: ಮಗ ಕಿರುಕುಳ ನೀಡುತ್ತಿದ್ದ ಎಂಬ ಕಾರಣಕ್ಕೆ, ಸಿಟ್ಟಿಗೆದ್ದ ತಂದೆ ಸ್ವಂತ ಮಗನ ಕುತ್ತಿಗೆಗೆ ಚಾಕೂವಿನಿಂದ ಇರಿದ ಘಟನೆ ಇಂದು ಬೆಳಿಗ್ಗೆ 4:30 ಕ್ಕೆ ಹಳೆ ಹುಬ್ಬಳ್ಳಿ ಹೆಗ್ಗೇರಿ ಆಯುರ್ವೇದ ಕಾಲೇಜಿನ ಹತ್ತಿರ ನಡೆದಿದೆ.
ಜಗದೀಶ ಸುಗೂರ (ಎರಡನೇ ಮಗ) ಚಾಕು ಇರಿತಕ್ಕೊಳಗಾದ ವ್ಯಕ್ತಿ. ತಂದೆ ಶಂಕರ ರಾಮಕೃಷ್ಣ ಸೂಗೂರ ಎಂಬುವರ ಮಗ ಪದೇ ಪದೇ ಕಿರುಕುಳ ನೀಡುತ್ತಿದ್ದ. ಸೋಮವಾರು ತಂದೆ ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲದೇ, ಕೈಯಲ್ಲಿ ಸಿಕ್ಕಿದ ವಸ್ತುಗಳಿಂದ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಆಕ್ರೋಶಕೊಂಡ ತಂದೆ ಮಗನ ಕುತ್ತಿಗೆಗೆ ಚಾಕೂವಿನಿಂದ ಇರಿದಿದ್ದಾನೆ.
ಸದ್ಯ ಜಗದೀಶ ಸೂಗೂರ ನನ್ನು ನಗರದ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ರವಾನಿಸಲಾಗಿದೆ. ಕುತ್ತಿನ ಭಾಗಕ್ಕೆ ಇರಿದ ಹಿನ್ನೆಲೆ ಅತೀಯಾದ ರಕ್ತಸ್ರಾವವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಳೆ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/07/2022 11:52 am