ಹುಬ್ಬಳ್ಳಿ: ಆಟೋ ರಿಕ್ಷಾದಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಚಾಲಕ ಪಾನೀಯವೊಂದನ್ನು ಕುಡಿಸಿ ಅರೆ ಪ್ರಜ್ಞಾವಸ್ಥೆಗೆ ತಲುಪುವಂತೆ ಮಾಡಿ, ಅವರ ಬಳಿ ಇದ್ದ 1,08,100 ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣ, ಮೊಬೈಲ್, ನಗದು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಹೌದು..ಮಂಜುಳಾ ಎಂಬುವರು ಜು.7ರಂದು 'ಕೇಶ್ವಾಪುರದ ವೆಂಕಟೇಶ ಕಾಲನಿಯಿಂದ ಬೆಂಗೇರಿಗೆ ತೆರಳಲು ಆಟೋ ಹತ್ತಿದರು. ಆಟೋ ಚಾಲಕ ಅವರ ಚಿನ್ನಾಭರಣ ಕದಿಯಲು ಹೊಂಚು ಹಾಕಿದ್ದ. ಮಂಜುಳಾ ಅವರ ಹತ್ತಿರ ಬಂದು ಧೂಳಿನಿಂದ ತುಂಬಿದ್ದ ಬಟ್ಟೆಯೊಂದನ್ನು ಕೊಡವಿದ್ದ. ಇದರಿಂದ ಸುಸ್ತಾಗಿದ್ದ ಮಂಜುಳಾ ಅವರಿಗೆ ಪಾನೀಯವೊಂದನ್ನು ಕುಡಿಸಿ ಅರೆ ಪ್ರಜ್ಞಾವಸ್ಥೆ ಆಗುವಂತೆ ಮಾಡಿದ್ದ. ನಂತರ ಅವರ ಬಳಿ ಇದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಮಂಜುಳಾ ಪ್ರಕರಣ ದಾಖಲಿಸಿದ್ದಾರೆ.
Kshetra Samachara
12/07/2022 10:59 am