ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾಲ ತೀರಿಸಲಾಗದೇ ರೈತ ಆತ್ಮಹತ್ಯೆ

ಹುಬ್ಬಳ್ಳಿ: ಆರು ಲಕ್ಷ ರೂ. ಬೆಳೆ ಸಾಲ ಹಾಗೂ 2 ಲಕ್ಷ ರೂ. ಕೈಗಡ ಸಾಲ ತೀರಿಸಲಾಗದೇ ಮನನೊಂದು ರೈತನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೆಬಸೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಮೇಶ ವೆಂಕಪ್ಪ ಹೊಸಮನಿ (51) ಆತ್ಮಹತ್ಯೆ ಮಾಡಿಕೊಂಡವರು. ಬ್ಯಾಂಕ್ ಆಫ್ ಬರೋಡಾದ ಹೆಬಸೂರ ಶಾಖೆಯಲ್ಲಿ ರಮೇಶ 6 ಲಕ್ಷ ರೂ. ಬೆಳೆ ಸಾಲ ಪಡೆದಿದ್ದರು. ಗ್ರಾಮದಲ್ಲಿ 2 ಲಕ್ಷ ರೂ. ಕೈಗಡ ಸಾಲ ಪಡೆದಿದ್ದರು. ಈ ಸಾಲ ತೀರಿಸುವುದು ಹೇಗೆ ಎಂದು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

09/07/2022 11:31 am

Cinque Terre

23.38 K

Cinque Terre

0

ಸಂಬಂಧಿತ ಸುದ್ದಿ