ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಮನೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ನವಲಗುಂದ: ನವಲಗುಂದ ಪಟ್ಟಣದ ಹೆಬಸೂರ ಪ್ಲಾಟ್‌ನಲ್ಲಿ ವ್ಯಕ್ತಿಯೊರ್ವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಮೋಹನರೆಡ್ಡಿ ರಾಮರೆಡ್ಡಿ ಕರಿಯತ್ತಿನ ಎಂದು ತಿಳಿದು ಬಂದಿದ್ದು, ರಾತ್ರಿಯಿಂದ ಮನೆಯ ಬಾಗಿಲು ತೆರೆದಿರಲಿಲ್ಲ ಎನ್ನಲಾಗಿದ್ದು, ಬೆಳಗಿನಜಾವ ಕಿಟಕಿಯಿಂದ ನೋಡಿದಾಗ ಘಟನೆ ತಿಳಿದಿದೆ.

ತಕ್ಷಣ ಆತನ ಸಹೋದರ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಲೇ ಸ್ಥಳಕ್ಕೆ ನವಲಗುಂದ ಪೊಲೀಸ್ ಠಾಣೆಯ ಪಿಎಸ್ಐ ಕಲ್ಮೇಶ ಬೆನ್ನೂರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಂತರ ಸ್ಥಳೀಯರ ಸಹಾಯದಿಂದ ಶವವನ್ನು ನವಲಗುಂದ ತಾಲೂಕಾ ಆಸ್ಪತ್ರೆಗೆ ರವಾನಿಸಲಾಯಿತು.

Edited By :
Kshetra Samachara

Kshetra Samachara

06/07/2022 06:04 pm

Cinque Terre

44.63 K

Cinque Terre

0

ಸಂಬಂಧಿತ ಸುದ್ದಿ