ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸರಳವಾಸ್ತು ಗುರೂಜಿ ಕೊಲೆಯ ಸ್ಪೋಟಕ ಮಾಹಿತಿ: ಹತ್ತಿರ ಇದ್ದವರೇ ಹತ್ಯೆ ಮಾಡಿದ್ರಾ?

ಹುಬ್ಬಳ್ಳಿ: ಖ್ಯಾತ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿಯವರ ಕೊಲೆಗೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯೊಂದು ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಲಭ್ಯವಾಗಿದ್ದು,‌ಗುರೂಜಿ ಹತ್ಯೆಯ ಆರೋಪಿ ಮಹಾಂತೇಶ್ ಶಿರೂರ್ ಎಂಬುವಂತ ಮಾಹಿತಿ ಲಭ್ಯವಾಗಿದ್ದು, ಸಿಸಿ ಟಿವಿ ದೃಶ್ಯದಲ್ಲಿ ಗುರೂಜಿಯ ಆಪ್ತ ಮಹಾಂತೇಶ ಶಿರೂರ್ ಕಾಣಿಸಿಕೊಂಡಿದ್ದು, ಈಗ ಮಹಾಂತೇಶ್​ ಪತ್ನಿ ವಶಕ್ಕೆ ಪಡೆದ ಪೊಲೀಸರಿಂದ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಗುರೂಜಿ ಜತೆಗೇ ಇದ್ದವರೇ ಕೊಂದು ಹಾಕಿಬಿಟ್ಟರಾ..? ಎಂಬುವಂತ ಅನುಮಾನ ವ್ಯಕ್ತವಾಗಿದ್ದು, ಗುರೂಜಿ ಜತೆಗಿದ್ದ ಕೆಲಸಗಾರರಿಂದಲೇ ಹತ್ಯೆ ನಡೆದಿದೆಯಾ ಎಂಬುವಂತ ಮತ್ತೊಂದು ಅನುಮಾನ ಸ್ಪೋಟಕ ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಹುಬ್ಬಳ್ಳಿ ಪೊಲೀಸರಿಗೆ ಹಂತಕರ ಖಚಿತ ಮಾಹಿತಿ ಪತ್ತೆಯಾಗಿದ್ದು, ಗುರೂಜಿ ಕೊಲೆಗೆ ರಿಯಲ್ ಎಸ್ಟೇಟ್ ವ್ಯವಹಾರವೇ ಕಾರಣ ಎಂಬುವಂತ ಮಾತು ಕೇಳಿ ಬರುತ್ತಿದೆ.

ಇನ್ನೂ ಸಿಸಿಟಿವಿಯಲ್ಲಿ ಹಂತಕ ಮಹಾಂತೇಶ್ ಶಿರೂರು ಸೆರೆಯಾಗಿದ್ದಾನೆ. ಗುರೂಜಿ ಜತೆ ಬಹಳ ವರ್ಷದಿಂದ ಜತೆಗಿದ್ದವರಿಂದಲೇ ಕೊಲೆಯಾಗಿರುವ ಅನುಮಾನ ವ್ಯಕ್ತವಾಗಿದ್ದು, ಗೋಕುಲ್ ರೋಡ್​​ನ ಗೂರೂಜಿ ಅಪಾರ್ಟ್​ಮೆಂಟ್​ನಲ್ಲೇ ಹಂತಕ ವಾಸ ಮಾಡುತ್ತಿದ್ದ ಎಂಬುವಂತ ಮಾಹಿತಿ ಲಭ್ಯವಾಗಿದ್ದು, ಗೋಕುಲ್ ರಸ್ತೆ ಡೆಕತ್ಲಾನ್​ ಹಿಂಭಾಗದ ಅಪಾರ್ಟ್​ಮೆಂಟ್​ನಲ್ಲಿದ್ದ ಗುರೂಜಿ ಎಂಬುವಂತ ಮಾಹಿತಿ ಲಭ್ಯವಾಗಿದೆ.

ಮಹಾಂತೇಶ್​ ಶಿರೂರು ಎಂಬಾತನ ಮೇಲೆ ಗುರೂಜಿ ಕುಟುಂಬಸ್ಥರ ಅನುಮಾನ ವ್ಯಕ್ತವಾಗಿದ್ದು,ಗುರೂಜಿ ಜತೆ ಕೆಲಸ ಮಾಡುತ್ತಿದ್ದ ಮಹಾಂತೇಶ್ ಶಿರೂರು, ಪತ್ನಿ ವನಜಾಕ್ಷಿಯನ್ನು ವಶಕ್ಕೆ ಪಡೆದಿದ್ದಾರೆ.

2016 ರವರೆಗೂ ಗುರೂಜಿ ಜತೆಗೇ ಇದ್ದ ಮಹಾಂತೇಶ್ ಶಿರೂರು, 2019 ರವರೆಗೂ ಗುರೂಜಿ ಜತೆಗೆ ಕೆಲಸಕ್ಕಿದ್ದ ಹಂತಕನ ಪತ್ನಿ ವನಜಾಕ್ಷಿ ಇವರಿಬ್ಬರಿಗೂ ಮದುವೆ ಮಾಡಿಸಿದ್ದೇ ಚಂದ್ರಶೇಖರ್ ಗುರೂಜಿ. ಆದರೆ ಗುರೂಜಿ ಜತೆ ವ್ಯವಹಾರ ಚಟುವಟಿಕೆ ಬಗ್ಗೆ ಭಿನ್ನಾಭಿಪ್ರಾಯದಿಂದ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಚಂದ್ರಶೇಖರ್​ ಗುರೂಜಿ ಸೋದರನ ಮಕ್ಕಳಿಂದ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಅಪಾರ್ಟ್​ಮೆಂಟ್​ 008 ರಲ್ಲಿ ಗುರೂಜಿ, 308 ರಲ್ಲಿ ಮಹಾಂತೇಶ್ ವಾಸವಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/07/2022 04:09 pm

Cinque Terre

201.3 K

Cinque Terre

3

ಸಂಬಂಧಿತ ಸುದ್ದಿ