ಹುಬ್ಬಳ್ಳಿ: 'ಮೈಸೂರು ಹೈ ಗ್ರಾಂಟ್ ಕ್ಯಾಪಿಟಲ್ ಸಾಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ' ಹೆಸರಿನಲ್ಲಿ ಧಾರವಾಡ, ಗದಗ, ಬೆಳಗಾವಿ ಸೇರಿ ಇತರೆ ಜಿಲ್ಲೆಗಳಲ್ಲಿ ಹತ್ತಾರು ರೈತರಿಂದ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ವಂಚಿತರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹೌದು. ಷೇರು ಮಾರುಕಟ್ಟೆ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡುವುದಾಗಿ ಹೇಳಿ ವಂಚಿಸಲಾಗಿದೆ ಎಂದು ರೈತರು ದೂರಿದ್ದಾರೆ. ಸುಮಾರು 10ರಿಂದ 15 ಕೋಟಿ ರೂ. ಹಗರಣ ಇದಾಗಿದೆ ಎಂದು ಆರೋಪಿಸಿದ್ದಾರೆ. ಆರೋಪಿಗಳು ಹುಬ್ಬಳ್ಳಿ ಮೂಲದವರಾಗಿದ್ದು, ಅವರನ್ನು ಬಂಧಿಸಿ ಹಣ ಕೊಡಿಸುವಂತೆ ರೈತರು ಗ್ರಾಮೀಣ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದು, ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಕುಸುಗಲ್‌ನ ಸಿದ್ದರಾಮ, ಕೋಗಿಲಗೇರಿಯ ದ್ಯಾಮಣ್ಣ ಬಿ. ಹಾಗೂ ಸತೀಶ ಜೆ. ಹಾಗೂ ಇನ್ನಿತರರು ನಮ್ಮನ್ನು ವಂಚಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಮೊದಲು ಎಕ್ವಾಲಿಸ್ ಕಂಪನಿಯ ಗೊಬ್ಬರ, ಕೀಟನಾಶಕ ತಂದು ನಮ್ಮ ವಿಶ್ವಾಸ ಗಳಿಸಿಕೊಂಡರು. ಬಳಿಕ ಹೂಡಿಕೆ ಮಾಡಿದರೆ 1 ಲಕ್ಷಕ್ಕೆ ಪ್ರತಿ ತಿಂಗಳು 9 ಸಾವಿರ ರೂ. ನೀಡುವುದಾಗಿ ಹೇಳಿ ನನ್ನಿಂದ 7.50 ಲಕ್ಷ ರೂ. ಪಡೆದಿದ್ದಾರೆ. ಒಂದೆರಡು ಬಾರಿ ಅದರಂತೆ ಹಣ ಪಾವತಿಸಿದರು. ಆದರೆ, 2021ರ ಅಕ್ಟೋಬರ್, ಬಳಿಕ ತಿಂಗಳಿಗೆ ಬರಬೇಕಾಗಿದ್ದ ಹಣ ನೀಡಲಿಲ್ಲ. ಹೀಗೆ ಸುಮಾರು ರೈತರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ ವಂಚಿತರು, ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.
Kshetra Samachara
05/07/2022 12:21 pm