ಹುಬ್ಬಳ್ಳಿ: ಆತ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರಾಧ್ಯಾಪಕ, ಆಕೆಯೂ ಧಾರವಾಡ ಕೆಸಿಡಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿ. ಪ್ರೀತಿಸಿ ಮದುವೆಯಾಗಿದ್ದರು. ಆದರೆ ಆ ದುಷ್ಟ ಮಾಡಿದ್ದೇನು ಗೊತ್ತೆ?
ವಿದ್ಯಾರ್ಥಿಗಳಿಗೆ ಬದುಕಿನ ಪಾಠ ಹೇಳಬೇಕಾದ ಪ್ರಾಧ್ಯಾಪಕ ಪತ್ನಿಯನ್ನು ಅಮಾನುಷವಾಗಿ ಕೊಂದು ಹಾಕಿದ.
ಹುಬ್ಬಳ್ಳಿ ಜಾಬಿನ್ ಕಾಲೇಜ್ ಪ್ರಾಧ್ಯಾಪಕ ಉದಯಕುಮಾರ್ ಕಾಂಬಳೆ ಎಂಬಾತ ಡಿಸೆಂಬರ್ 2012 ರಲ್ಲಿ ಶ್ರೀಸೀಮಾ ಎಂಬ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆತನಿಗೆ ಮೊದಲು ಆಕೆ ಸುಂದರಿಯಾಗಿಯೇ ಕಂಡಿದ್ದಳು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ನೀನು ಕುರೂಪಿಯಾಗಿದ್ದಿಯಾ, ಅಡುಗೆ ಮಾಡಲು ಬರುವುದಿಲ್ಲ ಎಂದು ಕ್ಷುಲ್ಲಕ ಕಾರಣ ತೆಗೆದು ಆಕೆಗೆ ಕಿರುಕಳ ದೈಹಿಕ ಹಾಗೂ ಮಾನಸಿಕ ಕಿರುಕಳ ಕೊಡ ತೊಡಗಿದ್ದ.
ಅಂತೂ ಕೊನೆಗೆ 2013 ಎಪ್ರಿಲ್ 18 ರಂದು ಡೈವೋರ್ಸಗಾಗಿ ಜಗಳ ತೆಗೆದು ಆಕೆಗೆ ಚಾಕುವಿನಿಂದ ದೇಹದ ತುಂಬ ಇರಿದು ಅಮಾನುಷವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಶ್ರೀಸೀಮಾಳ ತಂದೆ ನೀಡಿದ ದೂರಿನ್ವಯ ಹುಬ್ಬಳ್ಳಿ ವಿದ್ಯಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಪತ್ನಿ ಶ್ರೀಸೀಮಾಳನ್ನು ಕೊಲೆ ಮಾಡಿದ್ದಕ್ಕಾಗಿ ಉದಯಕುಮಾರ್ ಕಾಂಬಳೆಗೆ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ಹಾಗೂ 55,000 ರೂ ದಂಡ ವಿಧಿಸಿದೆ. ದಂಡದ ಹಣ ನೀಡುವಲ್ಲಿ ವಿಫಲವಾದರೆ ಮತ್ತೇ ಆರು ತಿಂಗಳು ಸಾದಾ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಲಾಗಿದೆ.
ನ್ಯಾಯಾಧೀಶರಾದ ಸಿದ್ದಣ್ಣ ಹಂದರಾಳ ಪ್ರಕರಣ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ. ಅಭಿಯೋಜಕರಾದ ಗಿರಿಜಾ ಎಸ್ ತಮ್ಮಿನಾಳ ಸರಕಾರದ ಪರ ವಾದ ಮಂಡಿಸಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/07/2022 09:11 pm