ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇಬ್ಬರು ಸುಲಿಗೆಕೋರರ ಬಂಧನ; ಲಕ್ಷಾಂತರ ರೂ. ಮೌಲ್ಯದ ಮೊಬೈಲ್ ವಶ!

ಹುಬ್ಬಳ್ಳಿ: ಸರಣಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಉಪನಗರ ಠಾಣೆಯ ಪೊಲೀಸರು ಬಂಧನ ಮಾಡಿ ನ್ಯಾಯಲಯಕ್ಕೆ ಒಪ್ಪಿಸಿದ್ದಾರೆ.

ಕೌಲಪೇಟ್ ನೀವಾಸಿ ವಿಶಾಲ ಕುಟ್ರಾ (20), ತೊರವಿ ಹಕ್ಕಲ ವಡ್ಡರ ಓಣಿ ನಿವಾಸಿ ಗಂಗಾಧರ ಬಬ್ಲು (19) ಬಂಧಿತ ಆರೋಪಿಗಳು. ಇವರು ಸುಮಾರು ದಿನಗಳಿಂದ ಮೊಬೈಲ್, ಬೈಕ್ ಕಳ್ಳತನ ಮಾಡಿಕೊಂಡಿದ್ದರು. ಕಳೆದ ಎರಡು ದಿನಗಳ ಹಿಂದೆ ವ್ಯಕ್ತಿಯೊಬ್ಬ ನಗರದ ಮಿನಿ ವಿಧಾನಸೌಧ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ, ಈ ಇಬ್ಬರು ಸ್ಕೂಟಿಯಲ್ಲಿ ಬಂದು ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಆ ವ್ಯಕ್ತಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿದ ಪೊಲೀಸರು ಠಾಣೆಯ ಇನ್ಸ್ಪೆಕ್ಟರ್ ಡಿ.ಬಿ.ರವಿಚಂದ್ರ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಈ ಇಬ್ಬರು ಕಳ್ಳರನ್ನು ಬಂಧನ ಮಾಡಿದ್ದಾರೆ.

ಇವರಿಂದ ಸುಮಾರು 1.07 ಲಕ್ಷ ರೂ. ಬೆಲೆ ಬಾಳುವ ಸುಮಾರು 12 ಮೊಬೈಲ್‌ಗಳನ್ನು ಮತ್ತು 1.4 ಲಕ್ಷ ರೂ. ಬೆಲೆ ಬಾಳುವ ಒಂದು ವಾಹನ ವಶ ಪಡೆದುಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಠಾಣೆಯ ಇನ್ಸ್ಪೆಕ್ಟರ್ ರವಿಚಂದ್ರ ಡಿ.ಬಿ, ಪಿಎಸ್ಐ ಕವಿತಾ ಎಸ್, ಎಎಸ್ಐ ಎಮ್ ಆರ್ ಮಲ್ಲಿಗವಾಡ, ಮತ್ತು ಸಿಬ್ಬಂದಿ ರೇಣು ಸಿಕ್ಕಲಗೇರ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಮಂಜುನಾಥ ಹಾಲರವ ಸೇರಿದಂತೆ ಸಿಬ್ಬಂದಿಗೆ ಹು-ಧಾ ಪೊಲೀಸ್ ಕಮೀಷನರ್ ಲಾಬುರಾಮ ಅವರು ಶ್ಲಾಘನೀಯ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

30/06/2022 10:30 am

Cinque Terre

23.01 K

Cinque Terre

1

ಸಂಬಂಧಿತ ಸುದ್ದಿ