ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಕುಲ ರೋಡ್ ಪೊಲೀಸರ ಕಾರ್ಯಾಚರಣೆ: ಐವರು ಸರಗಳ್ಳರ ಬಂಧನ

ಹುಬ್ಬಳ್ಳಿ:ಸರಗಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಐವರು ಸರಗಳ್ಳರನ್ನು ಬಂಧಿಸುವಲ್ಲಿ ಗೋಕುಲ ರೋಡ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಗೋಕುಲ ರೋಡ್ ಪೋಲಿಸರು ಕಾರ್ಯಾಚರಣೆ ಮೂಲಕ ಕುಖ್ಯಾತ ಸರಗಳ್ಳರ ಬಂಧನ ಮಾಡಿದ್ದು, ಬಂಧಿತರಿಂದ 150 ಗ್ರಾಂ ಚಿನ್ನ, ಒಂದು ಬೈಕ್, ಒಂದು ಕಾರು ವಶಕ್ಕೆ ಪಡೆದಿದ್ದಾರೆ.

ಕೊಲ್ಹಾಪುರ, ಧಾರವಾಡ, ಹುಬ್ಬಳ್ಳಿ ಹಾಗೂ ಬೆಳಗಾವಿಗಳಲ್ಲಿ ಸರಗಳ್ಳತನ ಮಾಡಿದ್ದ ಆರೋಪಿಗಳನ್ನು ಸೂಕ್ತ ಮಾಹಿತಿ ಕಲೆ ಹಾಕಿದ ಪೊಲೀಸ್ ಇನ್ಸ್ ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ತಂಡ ಸರಗಳ್ಳರನ್ನು ಹೆಡೆಮುರಿ ಕಟ್ಟಿದ್ದು, ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

28/06/2022 03:26 pm

Cinque Terre

26 K

Cinque Terre

1

ಸಂಬಂಧಿತ ಸುದ್ದಿ