ಕೆಲ ದಿನಗಳ ಹಿಂದೆ ಧಾರವಾಡ ಜಿಲ್ಲೆ ನವಲಗುಂದ ಹೊರವಲಯದಲ್ಲಿ ಅಕ್ರಮ ಮಣ್ಣುಗಣಿಗಾರಿಕೆ ನಡೆಯುವ ಬಗ್ಗೆ ನವಲಗುಂದ ತಹಶೀಲ್ದಾರ್ ಗೆ ಮಾಹಿತಿ ಬಂದಿತ್ತು. ಅಲ್ಲವೇ ಸತ್ಯಾ ಸತ್ಯತೆ ತಿಳಿದು ನೋಡಿದಾಗ ಅಕ್ರಮ ಮಣ್ಣು ಗಾರಿಕೆ ನಡೆಯುವುದು ಖಾತ್ರಿ ಆಗಿತ್ತು. ದೃಶ್ಯಗಳಲ್ಲಿ ಕಾಣುವಂತೆ ಜಮೀನಿನಲ್ಲಿ ಗರಸು ಮಣ್ಣು ತೆಗೆದು ಲಾರಿಗಳಲ್ಲಿ ತುಂಬಲಾಗುತ್ತದೆ. ಆದರೂ ಇಲ್ಲಿ ಯಾವುದೇ ನಿಯಮ ಅಪ್ಲೈ ಆಗುವುದಿಲ್ಲ.
ನವಲಗುಂದ ದಿಂದ 3 km ದೂರದ ರೋಣ ರಸ್ತೆಯಲ್ಲಿ ಸದ್ಯ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಅಲ್ಲಿ ಅಷ್ಟೇ ಅಲ್ಲ ನವಲಗುಂದ ಸುತ್ತ ಮುತ್ತಲೂ ನಡೀತಿದೆ. ಯಾವುದೇ ರೀತಿ ಕೃಷಿ ಜಮೀನು ಭೂ ಪರಿವರ್ತನೆ ಇಲ್ಲದೆ ನಿಯಮಾನುಸಾರ ನೈಸರ್ಗಿಕ ಸಂಪತನ್ನು ತೆಗೆಯಬಾರದು ಎನ್ನುವುದು ನಿಯಮ ಆಗಿದೆ. ಆದರೆ ನಮ್ಮ ಜವಳಿ ಸಾಹೇಬರ ತವರು ಕ್ಷೇತ್ರದಲ್ಲಿ ಮಾತ್ರ ಎಲ್ಲವೂ ಯೆಗ್ಗಿಲ್ಲದೇ ಸಾಗುತ್ತಿದೆ.
ಈಗಾಗಲೇ ಅಧಿಕಾರಿಗಳು ಗಿರಿಮಲ್ಲೇಶ್ ದ್ಯಾಮಪ್ಪ ಶೇಲೆನ್ನವರ ಗೆ ನೋಟಿಸ್ ನೀಡಿದ್ದಾರೆ. ಆದರೂ ಕೂಡ ಅಕ್ರಮ ನಿಲ್ಲುತ್ತಿಲ್ಲ. ಇನ್ನೂ ಕ್ರಮ ಕೈಗೊಳ್ಳಲು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಕೂಡ ಮುಂದೆ ಬರಬಹುದು. ಆದರೆ ಅವರು ಕೂಡ ಮನಸ್ಸು ಮಾಡುತ್ತಿಲ್ಲ. ಹೀಗೆ ಆದರೆ ಮುಂದೊಂದು ದಿನ ಕೃಷಿ ಭೂಮಿಗಳು ದೊಡ್ಡ ದೊಡ್ಡ ಹೊಂಡಗಳಾಗಿ ಮಾರ್ಪಾಡು ಆಗುವುದಂತು ಸತ್ಯ ಆಗಿದೆ.
Kshetra Samachara
26/06/2022 06:32 pm