ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಿಮ್ಸ್‌ನಲ್ಲಿ ಮಗು ಕಳ್ಳತನ ಪ್ರಕರಣ: ಪಾಪಿ ತಾಯಿಗೆ 14 ದಿನಗಳ ನ್ಯಾಯಾಂಗ ಬಂಧನ

ಹುಬ್ಬಳ್ಳಿ: ಕಿಮ್ಸ್‌ನಲ್ಲಿ ಮಗು ಕಳ್ಳತನ ಪ್ರಕರಣದಲ್ಲಿ ತಾಯಿಯೇ ದೋಷಿ ಎಂಬುದು ಸಾಬೀತಾದ ಕಾರಣ ಹೆತ್ತ ಮಗುವನ್ನು ಎಸೆದ ತಾಯಿಯನ್ನು ಕೊನೆಗೂ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜೂನ್ 13 ರಂದು ಮಧ್ಯಾಹ್ನ ಕಿಮ್ಸ್ ಆವರಣಲ್ಲಿ ಕೈಯಲ್ಲಿದ್ದ ಮಗು ಕಳ್ಳತನವಾಗಿದೆ ಎಂದು ಮಗುವಿನ ತಾಯಿ ಸಲ್ಮಾ‌ ದೂರು ಸಲ್ಲಿಸಿದ್ದಳು. ಮಗುವಿನ ತಾಯಿ ಹಾಗೂ ಪೋಷಕರ ದೂರಿನ ಅನ್ವಯ ಪೊಲೀಸರು ಕಿಮ್ಸ್‌ನ 300 ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಕೊನೆಗೆ ತಾಯಿಯೇ ಮಗುವನ್ನು ಹೊರಗೆ ಎಸೆದು ಕಳ್ಳತನದ ನಾಟವಾಡಿದ್ದಾಳೆ ಎಂಬುದನ್ನು ಪತ್ತೆ ಹಚ್ಚಿದ್ದರು.

ಕೊನೆಗೆ ಪೊಲೀಸರು ಮಗುವಿನ ತಾಯಿ ಸಲ್ಮಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮಗುವನ್ನು ಬಾತ್ ರೂಮ್‌ನ ಕಿಟಕಿಯ ಮೂಲಕ‌ ಹೊರಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾಳೆ. ಮಗುವಿನ ಮಿದುಳು ಬೆಳವಣಿಗೆ ಆಗದ ಹಿನ್ನಲೆ ಎಸೆದಿರುವದಾಗಿ ತಾಯಿ ಹೇಳಿಕೆ ನೀಡಿದ್ದಾಳೆ. ಅನಾರೋಗ್ಯದ ಹಿನ್ನಲೆಯಲ್ಲಿ ತಾಯಿಗೆ ಮಗು ಬೇಡವಾಗಿದ್ದರಿಂದ ಎಸೆದಿದ್ದಳು. ಆದ್ರೆ ಮರುದಿನ ಬೆಳಿಗ್ಗೆ ಎಸೆದಿದ್ದ ಜಾಗದಲ್ಲಿ ಜೀವಂತವಾಗಿ ಮಗು ಸಿಕ್ಕಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಮುಂದುವರೆದ ಚಿಕಿತ್ಸೆ ಮುಂದುವರೆದಿದ್ದು, ಪ್ರಾಣಾಪಾಯದಿಂದ 40 ದಿನದ ಮಗು ಪಾರಾಗಿದೆ.

ಇನ್ನು ಕೂಲಂಕೂಷ ವಿಚಾರಣೆಯ ಬಳಿಕ‌ ತಾಯಿ ಸಲ್ಮಾಳನ್ನು ಬಂಧಿಸಿದ ವಿದ್ಯಾನಗರ ಪೊಲೀಸರು. ಹುಬ್ಬಳ್ಳಿ ‌ಒಂದನೇ ಅಧಿಕ ದಿವಾಣಿ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳವರಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/06/2022 11:01 am

Cinque Terre

147.31 K

Cinque Terre

12

ಸಂಬಂಧಿತ ಸುದ್ದಿ