ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲೂ ಎಸಿಬಿ ಶಾಕ್: ಆರ್‌ಟಿಓ ಇನ್‌ಸ್ಪೆಕ್ಟರ್ ಮನೆ ಮೇಲೆ ದಾಳಿ

ಧಾರವಾಡ: ರಾಜ್ಯದ ವಿವಿಧೆಡೆ ಇಂದು ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದು, ಅವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಧಾರವಾಡದಲ್ಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಗಲಕೋಟೆಯಲ್ಲಿ ಆರ್‌ಟಿಓ ಇನ್‌ಸ್ಪೆಕ್ಟರ್ ಆಗಿರುವ ಯಲ್ಲಪ್ಪ ಪಡಸಾಲೆ ಅವರ ಲಕಮನಹಳ್ಳಿ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಶೋಧ ನಡೆಸಿದ್ದಾರೆ.

ಎಸಿಬಿ ಅಧಿಕಾರಿ ಮಹಾಂತೇಶ ಜಿದ್ದಿ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪಡಸಾಲೆ ಅವರ ಮನೆಯಲ್ಲಿ ಶೋಧ ನಡೆಸಿದ್ದಾರೆ.

Edited By :
Kshetra Samachara

Kshetra Samachara

17/06/2022 08:58 am

Cinque Terre

44.81 K

Cinque Terre

7

ಸಂಬಂಧಿತ ಸುದ್ದಿ