ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸರಿಗೆ ಲಕ್ಷಾಂತರ ರೂಪಾಯಿ ವಂಚನೆ: ದೂರು ದಾಖಲು

ಹುಬ್ಬಳ್ಳಿ: 'ಸೋಲಾರ್ ಗೋಲ್ಡ್ ಕೋಟ್' ಆಪ್ ಹೆಸರಿನಲ್ಲಿ ಇಬ್ಬರು ಪೊಲೀಸರು ಹಾಗೂ ಮತ್ತೊಬ್ಬರಿಂದ ಆನ್‌ಲೈನ್‌ ಮೂಲಕ ಹಣ ಹೂಡಿಕೆ ಮಾಡಿಸಿಕೊಂಡು 3,39,150 ರೂಪಾಯಿ ವಾಪಸ್ ಕೊಡದೇ ವಂಚಿಸಿರುವ ಪ್ರಕರಣ ವರದಿಯಾಗಿದೆ.

ರೈಲ್ವೆ ಪೊಲೀಸ್ ರಮೇಶಕುಮಾರ ಕಟಗಿ, ಮಾಳಪ್ಪ ಪೂಜಾರಿ ಹಾಗೂ ರಮೇಶ ಮೂಲಿಮನಿ ವಂಚನೆಗೀಡಾದವರು, 'ಸೋಲಾ‌ರ್ ಗೋಲ್ಡ್ ಕೋಟ್' ಆ್ಯಪ್ ಮೂಲಕ ಹಣ ಹೂಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಅಪರಿಚಿತರು ಆಮಿಷ ಒಡ್ಡಿದ್ದರು. ಇದನ್ನು ನಂಬಿದ ರಮೇಶಕುಮಾರ 1,52,000 ರೂ. ಹೂಡಿಕೆ ಮಾಡಿದ್ದರು. ನಂತರ ಇವರ ಸಹೋದರ ರಮೇಶ ಮೂಲಿಮನಿ 1,03,000 ರೂ. ಹಾಗೂ ಮಾಳಪ್ಪ ಪೂಜಾರಿ 1,52,000 ರೂ. ಸೇರಿ ಒಟ್ಟು 4,07,000 ರೂ. ಹೂಡಿದ್ದರು. ರಮೇಶಕುಮಾರ ಹಾಗೂ ಮಾಳಪ್ಪ ಅವರಿಗೆ ಹಂತ ಹಂತವಾಗಿ 67,850 ರೂ. ಮರಳಿಸಿದ್ದರು. ನಂತರ ಬಾಕಿ 3,39,150 ರೂ. ವಾಪಸ್‌ ಕೊಡದೇ ವಂಚಿಸಿದ್ದಾರೆ ಎಂದು ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

10/06/2022 10:13 am

Cinque Terre

21.63 K

Cinque Terre

4

ಸಂಬಂಧಿತ ಸುದ್ದಿ