ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಗೋಡೆ ಕುಸಿದು ವ್ಯಕ್ತಿ ಸಾವು, ಸ್ಥಳಕ್ಕೆ ತಹಶೀಲ್ದಾರ್ ಭೇಟಿ

ನವಲಗುಂದ : ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಗೆ ಬುಧವಾರ ಸಂಜೆ ನವಲಗುಂದ ಪಟ್ಟಣದ ಸಿದ್ದಾಪುರ ಓಣಿಯ ಬಳಿಯಲ್ಲಿನ ತೋಟದವರ ಚಹಾದ ಅಂಗಡಿಯ ಗೋಡೆ ಕುಸಿದ ಪರಿಣಾಮ ಅವಶೇಷಗಳ ಅಡಿ ಇಬ್ಬರು ಸಿಲುಕಿ ಓರ್ವ ಮೃತ ಪಟ್ಟಿದ್ದು, ಇನ್ನೊರ್ವನಿಗೆ ಗಾಯಗಳಾಗಿದೆ. ಘಟನೆ ಹಿನ್ನೆಲೆ ಸ್ಥಳಕ್ಕೆ ತಹಶೀಲ್ದಾರ್ ಅನಿಲ ಬಡಿಗೇರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಗೋಡೆ ಕುಸಿತದಲ್ಲಿ ಸಿಲುಕಿ ಮೃತ ಪಟ್ಟ ದುರ್ದೈವಿಯನ್ನು 52 ವಯಸ್ಸಿನ ಶಿವಪ್ಪ ಬಸವಂತಪ್ಪ ತೋಟದ ಎನ್ನಲಾಗಿದ್ದು, 48 ವಯಸ್ಸಿನ ಶಿದ್ಲಿಂಗಪ್ಪ ಕಲ್ಲಪ್ಪ ತೋಟದ ಗಾಯವಾಗಿದೆ. ಘಟನೆ ಹಿನ್ನೆಲೆ ಗಾಯಗೊಂಡ ಶಿದ್ಲಿಂಗಪ್ಪನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Edited By : PublicNext Desk
Kshetra Samachara

Kshetra Samachara

08/06/2022 09:07 pm

Cinque Terre

40.17 K

Cinque Terre

1

ಸಂಬಂಧಿತ ಸುದ್ದಿ