ಹುಬ್ಬಳ್ಳಿ: ನಗರದ ಮಾಧವನಗರ ಗುಡಿ ಓಣಿಯಲ್ಲಿ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಅವಳ ಗಂಡ ಮತ್ತು ಅತ್ತೆಯೇ ಕಾರಣವೆಂದು ಮೃತಳ ತಾಯಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.
ರವಿವಾರ ಬೆಳಗ್ಗೆ ಪವಿತ್ರಾ ಎಂಬುವಳು ಗುಡಿ ಓಣಿಯಲ್ಲಿ ತನ್ನ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಇವಳ ಸಾವಿಗೆ ಅವಳ ಪತಿ ಭರಮಲಿಂಗಪ್ಪ ಹಾಗೂ ಅತ್ತೆ ಯಮನವ್ವ ಅವರು ಹಣ ತರುವಂತೆ ಕೊಡುತ್ತಿದ್ದ ಮಾನಸಿಕ, ದೈಹಿಕ ಕಿರುಕುಳ ಕಾರಣವೆಂದು ಆರೋಪಿಸಿ ನರಗುಂದ ಹಳಬ ಕೇರಿಯ ಮಹಾದೇವಿ ದೂರು ಸಲ್ಲಿಸಿದ್ದಾರೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
08/06/2022 05:27 pm