ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಟ್ಕಾ ಚೀಟಿ ಬರೆಯುತ್ತಿದ್ದ ನಾಲ್ವರನ್ನು ಬಂಧಿಸಿದ ಬೆಂಡಿಗೇರಿ ಪೊಲೀಸರು

ಹುಬ್ಬಳ್ಳಿ: ನಗರದ ಗಣೇಶಪೇಟೆ, ಕರ್ಕಿ ಬಸವೇಶ್ವರ ನಗರದ ಬಸವೇಶ್ವರ ದೇವಸ್ಥಾನ ಹತ್ತಿರ ಹಾಗೂ ಗೋಕುಲ ರಸ್ತೆ ರವಿನಗರ ಕ್ರಾಸ್ ಬಳಿ ಮಂಗಳವಾರ ಮಟ್ಕಾ ಚೀಟಿ ಬರೆದುಕೊಳ್ಳುತ್ತಿದ್ದ ನಾಲ್ವರನ್ನು ಪೊಲೀಸರು ಪ್ರತ್ಯೇಕವಾಗಿ ಬಂಧಿಸಿ , ಅವರಿಂದ 10,360 ರೂ. ನಗದು ವಶಪಡಿಸಿಕೊಂಡಿದ್ದಾರೆ.

ನಗರದ ಗಣೇಶಪೇಟೆ ಹಾಗೂ ರವಿನಗರ ಕ್ರಾಸ್ ಹತ್ತಿರ ಮಟ್ಕಾ ಚೀಟಿ ಬರೆದುಕೊಳ್ಳುತ್ತಿದ್ದ ಇಬ್ಬರನ್ನು ಶಹರ ಹಾಗೂ ಗೋಕುಲ ರೋಡ್ ಪೊಲೀಸರು ಪ್ರತ್ಯೇಕವಾಗಿ ಬಂಧಿಸಿ , ಅವರಿಂದ 7440 ರೂ ನಗದು ಹಾಗೂ ಕೆ.ಬಿ.ನಗರದಲ್ಲಿ ಇಬ್ಬರನ್ನು ಬೆಂಡಿಗೇರಿ ಪೊಲೀಸರು ಬಂಧಿಸಿ , ಆವರಿಂದ 2,920 ರೂ ವಶಪಡಿಸಿಕೊಂಡಿದ್ದಾರೆ . ಶಹರ, ಗೋಕುಲ ರೋಡ್ ಮತ್ತು ಬೆಂಡಿಗೇರಿ ಠಾಣೆಗಳಲ್ಲಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿವೆ.

Edited By : Nagaraj Tulugeri
Kshetra Samachara

Kshetra Samachara

02/06/2022 11:36 am

Cinque Terre

34.95 K

Cinque Terre

1

ಸಂಬಂಧಿತ ಸುದ್ದಿ