ಕುಂದಗೋಳ : ರವಿವಾರ ಸಂಜೆ ಮನೆಯಿಂದ ಕಾಣೆಯಾದ ಬಾಲಕನೋರ್ವ ಕುಂದಗೋಳ ತಾಲೂಕಿನ ಹೊರವಲಯದ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಕುಂದಗೋಳ ಪಟ್ಟಣದ ನಿವಾಸಿ ಮಲಿಕರೆಹಾನ್ ಜಾವಿದಖಾನ್ ಪಠಾಣ್ ಎಂಬ 12 ವರ್ಷದ ಬಾಲಕನೇ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕುಂದಗೋಳ ಪಟ್ಟಣದಲ್ಲಿ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮಲಿಕರೆಹಾನ್ ಆಟವಾಡಲು ಮನೆಯಿಂದ ಹೊರ ಹೋಗಿ ಕಾಣೆಯಾಗಿದ್ದ ಮಗನನ್ನು ಎಲ್ಲೇಡೆ ಹುಡುಕಾಡಿದ ತಂದೆ ಜಾವಿದಖಾನ್ ಪೊಲೀಸರಿಗೆ ದೂರು ನೀಡಿದ್ದರು.
ಇಂದು ಮಧ್ಯಾಹ್ನದ ವೇಳೆ ಬಾಲಕನ ಶವ ಕುಂದಗೋಳದಿಂದ ಬೆನಕನಹಳ್ಳಿಗೆ ಸಂಪರ್ಕ ಕಲ್ಪಿಸುವ ಜಮೀನೊಂದರ ಕೆರೆಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ಕುಂದಗೋಳ ಪೊಲೀಸರು ಭೇಟಿ ನೀಡಿದ ಬಳಿಕ ಕೆರೆಯಿಂದ ಶವ ಹೊರತೆಗೆದು ಕುಂದಗೋಳ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಆಟದ ನೆಪದಲ್ಲಿ ಮನೆಯಿಂದ ಹೊರ ಹೋಗಿ ಮರಳಿ ಸಿಗದಾದ ಮಗನನ್ನು ಎಲ್ಲೇಡೆ ಹುಡುಕಾಡಿದ ಕುಟುಂಬಸ್ಥರಿಗೆ ಇದೀಗ ಅರಗಿಸಿಕೊಳ್ಳಲಾಗದ ನೋವುಂಟಾಗಿದೆ.
Kshetra Samachara
30/05/2022 07:19 pm