ಧಾರವಾಡ: ನಗರದ ಕೆಯುಡಿ ಕ್ಯಾಂಪಸ್‌ನ ಮಹಿಳೆಯೊಬ್ಬರಿಗೆ ಅಪರಿಚಿತನೊಬ್ಬ ಕೆನಡಾದ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ವಿವಿಧ ಶುಲ್ಕಗಳ ನೆಪದಲ್ಲಿ ಆನ್‌ಲೈನ್ ಮೂಲಕ 4,31,800 ರೂ. ವರ್ಗಾಯಿಸಿಕೊಂಡು ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಸಮೀನ ಎಂಬುವರಿಗೆ ವಂಚಕನು 2021ರ ಆಕ್ಟೋಬರ್ 5ರಂದು ಕರೆಮಾಡಿ, ಕೆನಡಾದ ಕೊನ್ನನಿಗಲ್ ಗ್ರುಪ್ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿ ಹಂತ ಹಂತವಾಗಿ ತನ್ನ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಮೋಸವೆಸಗಿದ್ದಾನೆ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
30/05/2022 03:44 pm