ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಟ್ರೇನ್ ನಲ್ಲಿ ಪ್ರಯಾಣ; ಸುಮಾರು 4.72 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

ಹುಬ್ಬಳ್ಳಿ: ವೃದ್ಧೆಯೊಬ್ಬರು ಮೈಸೂರು-ಧಾರವಾಡ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಂಚರಿಸುತ್ತಿದ್ದಾಗ ರಾತ್ರಿ ವೇಳೆ ಕಳ್ಳರು ಅವರ ಲಗೇಜ್‌ ಬ್ಯಾಗ್‌ನಲ್ಲಿದ್ದ ಅಂದಾಜು 4.72 ಲಕ್ಷ ರೂ. ಮೌಲ್ಯದ 105 ಗ್ರಾಂ ಚಿನ್ನಾಭರಣವಿದ್ದ ವ್ಯಾನಿಟಿ ಬ್ಯಾಗ್‌ ಕಳವು ಮಾಡಿದ್ದಾರೆ.

ಮೈಸೂರು ಬನ್ನಿಮಂಟಪದ ಪ್ರೇಮಾ ಎಂಬುವರು ತಮ್ಮ ಮಗಳು, ಮೊಮ್ಮಕ್ಕಳೊಂದಿಗೆ ಮೈಸೂರಿನಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾಗ ತಡರಾತ್ರಿ ಮಲಗಿದ್ದಾರೆ.

ಬೆಳಗ್ಗೆ ನಗರಕ್ಕೆ ಆಗಮಿಸಿ ವಿದ್ಯಾನಗರದಲ್ಲಿರುವ ಮೈದುನನ ಮನೆಗೆ ಹೋಗಿ ಬ್ಯಾಗ್‌ ಪರಿಶೀಲಿಸಿದಾಗಲೇ ತಲಾ 30 ಗ್ರಾಂನ ಎರಡೆಲೆ ಅವಲಕ್ಕಿ ಸರ ಮತ್ತು ಎರಡು ಬಳೆಗಳು ಹಾಗೂ 45ಗ್ರಾಂನ ಮಾಂಗಲ್ಯ ಸರವಿದ್ದ ವ್ಯಾನಿಟಿ ಬ್ಯಾಗ್‌ ಕಳವು ಆಗಿರುವುದು ಗೊತ್ತಾಗಿದೆ. ಪ್ರೇಮಾ ಅವರ ದೂರಿನ ಮೇರೆಗೆ ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

29/05/2022 09:07 pm

Cinque Terre

18.17 K

Cinque Terre

0

ಸಂಬಂಧಿತ ಸುದ್ದಿ