ಕಲಘಟಗಿ : ಪಟ್ಟಣದ ಫಿಶ್ ಮಾರ್ಕೆಟ್ ಹತ್ತಿರ ಗುರುವಾರ ರಾತ್ರಿ 11:30ಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಯವಕನ ಸ್ಥಿತಿ ಗಂಭೀರವಾಗಿದೆ.
ಹೌದು ಕಲಘಟಗಿ ಪಟ್ಟಣದ ಬೆಂಡಿಗೇರಿ ಓಣಿಯ ಅರ್ಜುನ ಕಾಳೆ ಎಂಬ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು ಹಲ್ಲೆ ಮಾಡಿರುವ ವ್ಯಕ್ತಿಗಳು ಯಾರೆಂಬುದು ತಿಳಿದು ಬಂದಿಲ್ಲ. ಹಲ್ಲೆಗೊಳಗಾದ ಯುವಕನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸಗೆ ದಾಖಲಿಸಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Kshetra Samachara
27/05/2022 03:06 pm