ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಗಾಂಜಾ ಹಾವಳಿ ಇಬ್ಬರು ಬಂಧನ ; ಪ್ರತ್ಯೇಕ ದೂರು ದಾಖಲು

ಹುಬ್ಬಳ್ಳಿ: ವಾಣಿಜ್ಯ ನಗರದಲ್ಲಿ ದಿನದಿಂದ ದಿನಕ್ಕೆ ಗಾಂಜಾ ಹಾವಳಿ ಹೆಚ್ಚಾಗುತ್ತಿದೆ. ಅವರನ್ನು ಮೆಟ್ಟಿಹಾಕಲು ಅವಳಿ ನಗರದ ಪೊಲೀಸರ ಕಾರ್ಯಚರಣೆ ಚುರುಕುಗೊಂಡಿದೆ. ಖಾಕಿ ಪಡೆ ಗಾಂಜಾ ಮಾರಾಟಗಾರರಿಗೆ ಬ್ರೇಕ್ ಹಾಕಲು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದಾರೆ.

ನಗರದ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಪ್ರತ್ಯೇಕವಾಗಿ ಬಂಧಿಸಿ , ಅವರಿಂದ ಅಂದಾಜು 8 ಸಾವಿರ ರೂ . ಮೌಲ್ಯದ 800 ಗ್ರಾಂ ಗಾಂಜಾ , 1 ಸಾವಿರ ರೂ.ನಗದು ಹಾಗೂ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಚಟ್ಟಿ ಮಠ ಕ್ರಾಸ್ ಹತ್ತಿರ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವನನ್ನು ಉಪನಗರ ಪೊಲೀಸರು ಬಂಧಿಸಿ, ಆತನಿಂದ 500 ಗ್ರಾಂ ಗಾಂಜಾ, 750 ನಗದು , ಒಂದು ವಾಹನ ವಶಪಡಿಸಿಕೊಂಡಿದ್ದಾರೆ. ಓರ್ವ ಪರಾರಿಯಾಗಿದ್ದಾನೆ. ಹಳೇಹುಬ್ಬಳ್ಳಿ ಅಕ್ಕಿಪೇಟ ಕ್ರಾಸ್ ಹತ್ತಿರ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿ, ಆತನಿಂದ 300 ಗ್ರಾಂ ಗಾಂಜಾ, ಒಂದು ವಾಹನ ವಶಪಡಿಸಿಕೊಂಡಿದ್ದಾರೆ.

ಉಪನಗರ ಪೊಲೀಸ್ ಇನ್ಸ್ಪೆಕ್ಟರ್ ಡಿ.ಬಿ ರವಿಚಂದ್ರ ನೇತೃತ್ವದಲ್ಲಿ ಚುರುಕುಗೊಂಡ ಕಾರ್ಯಚರಣೆ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. PSI BSP ಅಶೋಕ್, PSI ಉಮೇಶ್ ಗೌಡ ಪಾಟೀಲ್, ಸಿಬ್ಬಂದಿಗಳಾದ ಸುನಿಲ್ ಪಾಂಡೆ, ಮಂಜುನಾಥ ಯಕ್ಕ ಡಿ, ಮಲ್ಲಿಕಾರ್ಜುನ್ ಧನಿಗೊಂಡ, ಮಂಜುನಾಥ್ ಹಾಲವರ, ಪ್ರಕಾಶ್ ಕಲಗುಡಿ, ರೇಣಪ್ಪ ಸಿಕ್ಕಲಿಗೇರ, ರವಿ ಹೊಸಮನಿ

ಹಾಗೂ D N ಬೀರನ್ನವರ್, ಜಗದೀಶ್ ಹಟ್ಟಿ ಮುಂತಾದವರು ಗಾಂಜಾ ಮಾರಾಟಗಾರರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಉಪನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

26/05/2022 01:26 pm

Cinque Terre

56 K

Cinque Terre

8

ಸಂಬಂಧಿತ ಸುದ್ದಿ