ಧಾರವಾಡ: ಗೃಹಿಣಿಯೊಬ್ಬರಿಗೆ ಇನ್ನೊಂದು ಮದುವೆ ಮಾಡುವ ಸಂಬಂಧ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಶಿವಾನಂದ ಮುತ್ತಣ್ಣವರ ಸೇರಿದಂತೆ 16 ಜನರ ಮೇಲೆ ಧಾರವಾಡದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಜುಳಾ ಎನ್ನುವವರು ಈ ದೂರು ದಾಖಲಿಸಿದ್ದು, ಈ ದೂರಿನಲ್ಲಿ ಶಿವಾನಂದ ಮುತ್ತಣ್ಣವರ ಐದನೇ ಆರೋಪಿಯಾಗಿದ್ದಾರೆ. ಮಂಜುಳಾ ಎನ್ನುವವರು ಸಂತೋಷ ಎಂಬುವವರೊಂದಿಗೆ 2018ರಲ್ಲಿ ವಿವಾಹವಾಗಿದ್ದರು. ಆದರೆ, ಇವರಿಗೆ ಮಕ್ಕಳಾಗದ ಕಾರಣ ಸಂತೋಷನಿಗೆ ಬೇರೆ ಮದುವೆ ಮಾಡುವುದಕ್ಕೋಸ್ಕರ ಸಂತೋಷ ಸೊಟ್ಟಮ್ಮನವರ, ಶ್ವೇತಾ ಸೊಟ್ಟಮ್ಮನವರ, ರಾಮಪ್ಪ ಸೊಟ್ಟಮ್ಮನವರ, ರೇಣುಕಾ ಸೊಟ್ಟಮ್ಮನವರ, ಶಿವಾನಂದ ಮುತ್ತಣ್ಣವರ, ಜಗದೀಶ ಸೊಟ್ಟಮ್ಮನವರ, ಅನಿತಾ ಸೊಟ್ಟಮ್ಮನವರ, ಜ್ಯೋತಿ ಪರಪ್ಪನವರ, ಹೊನ್ನಮ್ಮ ಕಣೋಜ, ಯಲ್ಲಪ್ಪ ಹುಬ್ಬಳ್ಳಿ, ಶಿವರಾಜ ಕಣೋಜ ಎಂಬುವವರು ಮಂಜುಳಾ ಅವರನ್ನು ತವರು ಮನೆಗೆ ಕಳುಹಿಸಿ ಶ್ವೇತಾ ಎನ್ನುವವರೊಂದಿಗೆ ಸಂತೋಷನ ಎರಡನೇ ಮದುವೆ ಮಾಡಲು ನಿರ್ಧರಿಸಿದ್ದರು. ಈ ವಿಷಯ ಗೊತ್ತಾದ ಮಂಜುಳಾ ಅವರಿಗೆ ದೈಹಿಕ ಕಿರುಕುಳ ನೀಡಿ, ತವರು ಮನೆಯಿಂದ 20 ಲಕ್ಷ ವರದಕ್ಷಿಣೆ ತೆಗೆದುಕೊಂಡು ಬಾ, ಇಲ್ಲದಿದ್ದರೆ ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೆಂಡತಿ ಜೀವಂತ ಇರುವಾಗಲೇ ತನ್ನ ಪತಿಗೆ ಬೇರೆ ಮದುವೆ ಮಾಡಲು ಹೊರಟಿದ್ದಾರೆ ಅಲ್ಲದೇ, ತಮಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಮಂಜುಳಾ ಆರೋಪಿಸಿ ದೂರು ದಾಖಲಿಸಿದ್ದಾರೆ.
Kshetra Samachara
25/05/2022 08:32 pm